ಕೈ ನಡುಗುತ್ತಲಿದೆ.. ಮನ ಬೇಡ ಬೇಡವೆಂದರೂ ಒಂದು ವರುಷದ ಹಿಂದಿನ ನೆನಪಿನಂಗಳದತ್ತ ಜಾರುತ್ತಲಿದೆ.. ಬಹುಷಃ ಈ ಲೇಖನ ಮುಗಿಯುವ ಹೊತ್ತಿಗೆ ಕಣ್ಣಾಲಿಗಳು ತೇವಗೊಳ್ಳುವುದರಲ್ಲಿ ಸಂದೇಹವೇ ಇಲ್ಲ.. ಭವನೆಗಳಿಗಿದು ಜಾಗವಲ್ಲ, ಭಾವನಾತ್ಮಕ ಲೋಕಕ್ಕೂ ಇಲ್ಲಿಗೂ ಸಂಬಂಧವೇ ಇಲ್ಲವೇನೋ ಎಂದೆನಿಸುವ ಕಾಲ ಸನ್ನಿಹಿತವಾಗಿದೆ. ಹೌದು ಈಜು ಬರದಿದ್ದರೂ ಕೆರೆಯೊಳಗೆ ಧುಮುಕಿದ ಮೇಲೆ ಈಜು ಕಲಿಯಲೇ ಬೇಕು ತಾನೆ..?
ಒಂದುವರೆ ವರುಷದ ಹಿಂದಿನ ಮಾತದು. ಕಿಸೆಯಲ್ಲಿತ್ತು 6 ಸಾವಿರ ರುಪಾಯಿಗಳು, ಅದೂ ಕೂಡಾ ನನ್ನ ಸ್ವಂತದ್ದಲ್ಲ.. ಅಪ್ಪನ ದುಡಿಮೆಯ ಕಾಸು. ಮಾಧ್ಯಮ ಕ್ಷೇತ್ರದಲ್ಲಿ ಏನಾದರೂ ಸಾಧಿಸಬೇಕೆಂಬ ಛಲ ತೊಟ್ಟು ಬಂದ ನನಗೆ ದಾರಿದೀಪದಂತೆ ಭಾಸವಾದುದ್ದು, ಅದೇ ಆಯುಷ್ ಟಿವಿ.
ಗ್ರಾಫಿಕ್ಸ್ ಏನೆಂದು ಗೊತ್ತಿಲ್ಲ.. ಎಡಿಟಿಂಗ್ ಅಂದರೆ ಏನೆಂದು ಗೊತ್ತಿಲ್ಲ ಒಟ್ಟಿನಲ್ಲಿ ಮಾಧ್ಯಮ ಕ್ಷೇತ್ರವೇ ಹೊಸದು.. ಇರಲು ಸರಿಯಾದ ಸ್ಥಳವಿಲ್ಲ, ಎಲ್ಲಿರುವುದು ಎಂದು ಯೋಚಿಸುತ್ತಿರುವಾಗಲೇ ದೇವಲೋಕದ ದೇವದೂತನಾದವನು ಮೌಲಾನ, ಸುಮಾರು 2 ಗಂಟೆಯ ದಾರಿಯಾದರೂ ತತ್ಕಾಲಕ್ಕೆ ಅಲ್ಲಿಂದ ಆಫೀಸಿಗೆ ಬರುವುದು ಎಂದು ತೀರ್ಮಾನಿಸಿಬಿಟ್ಟೆ.
ಬೆಳಗ್ಗೆ 05:30ಕ್ಕೆ ಇಲೆಕ್ಟ್ರಾನಿಕ್ ಸಿಟಿಯಿಂದ ಹೊರಟರೆ ಆಫಿಸ್ ತಲುಪುವುದು 09:00 ಗಂಟೆಗೆ ಆದರೂ ಹಾಗೋ ಹೀಗೋ ಎಂಬಂತೆ ಆಫೀಸು ಸೇರಿ ಕೆಲಸ ಮಾಡುತ್ತಿದ್ದವನು ನಾನು, ನನಗೋ ಕಂಪ್ಯೂಟರಿನ ಮುಂದೆ ಕುಳಿತು ನುಡಿಯಲ್ಲಿ ಕ್ಲಿಕ್ಕಿಸುವುದು ಬಿಟ್ಟರೆ ಬೇರೆನೂ ಬರದು, ನನ್ನ ಕಾಯಕ ಅಷ್ಟೇ.. ದಿನಗಳುರುಳುತ್ತಿದ್ದವು.. ಕೈಯಲ್ಲಿ ತಂದ ಕಾಸು ಮುಗಿಯುವ ಹಂತಕ್ಕೆ ಬಂದಿತ್ತು. ಆದರೂ ಈ ನಡುವೆ ಒಂದು ವಿಚಾರವಂತೂ ಹೇಳಲೇಬೇಕು, ಪ್ರತಿದಿನ ಬೆಳಗ್ಗೆ ಆಫೀಸಿಗೆ ಚಹಾ ಕಾಫಿ ತರುವ ಹುಡುಗನೊಬ್ಬನಿದ್ದ ಆದರೆ ಅವನ ಬಳಿ ಚಹಾ ಸೇವಿಸಬೇಕಾದರೆ ನಾನು 01 ವಾರಗಳ ಕಾಲ ಕಾದಿದ್ದೇನೆ, ಕಾರಣವಿಷ್ಟೇ, ನಾನಂತೂ ಪಕ್ಕಾ ಹಳ್ಳಿಗ, ಒಂದೊಂದು ಪೈಸೆಗೂ ಲೆಕ್ಕ ಇಡುವವನು, ಆಫೀಸಿನೊಳಗೆ ಸಿಗುವ ಚಹಾ ಬಿಟ್ಟಿಯದ್ದೋ ಅಥವಾ ನಾವು ಹಣ ನೀಡಬೇಕೋ ಎಂದು ತಿಳಿಯಲು ಒಂದು ವಾರ ಚಹಾ ಸೇವಿಸಲಿಲ್ಲ ಅಷ್ಟೇ.. ಇನ್ನೂ ಆ ಚಹಾಗೂ ನಾವೇ ಹಣ ನೀಡಬೇಕಾದರೆ ನನ್ನಲ್ಲಿರುವ ಅಲ್ಪ ಕಾಸೂ ವ್ಯರ್ಥವಾಗಿ ಬೇಗನೇ ಭಿಕ್ಷುಕನಾಗಬೇಕಾದ ಪರಿಸ್ಥಿತಿ ಬರಬಹುದು ಎಂದು ಅಷ್ಟೇ..
ಇವೆಲ್ಲದರ ನಡುವೆ ಒಂದು ವಿಚಾರವಿದೆ, ತಂದಿರುವ ಕಾಸು 15 ದಿನಕ್ಕೆ ಖರ್ಚಾಗಿ ಬಿಟ್ಟಿದೆ, ಇನ್ನೊಬ್ಬರ ಬಳಿ ಕೇಳುವಷ್ಟು ಸ್ನೇಹವಿಲ್ಲ, ಏನು ಮಾಡೋಣ ಊಟಕ್ಕೂ ಕಾಸಿಲ್ಲ, ಈಗ ನನಗೆ ನಗು ಬರುವಂತಿದೆ, ಆದರೆ ಅಂದಿನ ನನ್ನ ಪರಿಸ್ಥಿತಿ ನನಗೇ ಕಣ್ಣೀರು ತರಿಸುತ್ತಿತ್ತು, ಮಧ್ಯಾಹ್ನದ ಹೊತ್ತಿಗೆ ಎಲ್ಲರೂ ಊಟಕ್ಕೆಂದು ತೆರಳಿದರೆ ಆನು ಹೋಟೆಲ್‍ಗೆ ಹೋಗಿ ಊಟ ಮಾಡುತ್ತೇನೆಂದು ಹೋಗುತ್ತಿದ್ದುದ್ದು ದೇವಸಂದ್ರ ಬಸ್ ನಿಲ್ದಾಣಕ್ಕೆ, ಅಲ್ಲಿ ಒಂದೈದು ನಿಮಿಷ ಕುಳಿತು ಹಸಿವಿನ ಮನದಲ್ಲೇ ಕಣ್ಣೀರಾಗಿದ್ದೂ ಇದೆ. ಬಳಿಕ ಆಫೀಸಿಗೆ ಮರಳಿ ಬಂದು ಊಟವಾಯಿತೆಂದು ಸುಳ್ಳು ಹೇಳಿದ್ದೂ ಇದೆ.
6 ತಿಂಗಳ ಬಳಿಕ ನನ್ನಲ್ಲಿ ಏನೋ ಒಂದು ಪ್ರತಿಭೆ ಇದೆ ಎಂದು ಯಾರೋ ಗುರುತಿಸಿದರೆಂದು ಕಾಣುತ್ತದೆ, ನನ್ನನ್ನು ಪ್ರೋಮೋ ಡಿಪಾರ್ಟ್‍ಮೆಂಟ್ ಗೆ ವರ್ಗಾವಣೆ ಮಾಡಿದ್ದರೋ, ಈ ಸಾಫ್ಟ್‍ವೇರ್ ಗಳ ತಲೆ ಬುಡವೇ ನನಗೆ ತಿಳಿದಿಲ್ಲ ಏನು ಮಾಡಲಿ ಎಂದು ಯೋಚಿಸುತ್ತಿದ್ದೆ , ಆಗ ದೇವದೂತರಾದದ್ದು ನಾಗೇಂದ್ರನ್ ಸರ್, ಮತ್ತು ಪ್ರಸನ್ನ ಸರ್, ನಾ ಹೇಳುವುದಕ್ಕೂ ಮುನ್ನವೇ ಅವರೇ ಎಲ್ಲ ಕಾರ್ಯಗಳನ್ನು ಮನಗಂಡು ಮಾಡಿ ಮುಗಿಸುತ್ತಿದ್ದರು, ಆದರೂ ಈ ಪುಣ್ಯಾತ್ಮನನ್ನು ವೈಜ್ಞಾನಿಕವಾಗಿ ಹೇಗಾದರೂ ಮುಂದಡಿ ಇಡಿಸಬೇಕೆಂದು ಛಲ ತೊಟ್ಟ ನಾಗೇಂದ್ರನ್ ಸರ್ ಅಂತೂ ಇಂತೂ ಪ್ರೀಮಿಯರ್ ಪ್ರೋ ಸಾಫ್ಟ್‍ವೇರ್ ಕಲಿಸುವ ಪ್ರಯತ್ನ ಮಾಡಿದರ , ಇರುವ ಕೊಂಚ ಸಮಯದಲ್ಲಿ ಅಲ್ಪಸ್ವಲ್ಪ ಪ್ರಿಮಿಯರ್ ಪ್ರೋ ನಾ ಕಲಿತಿರುವೆ.
ಆಯುಷ್ ವಾಹಿನಿಯಲ್ಲಿ ಒಂದುವರೆ ವರುಷಗಳಿಂದ ದುಡಿಯುತ್ತಿದ್ದ ನನಗೆ ಅದೇಕೋ ಆಯುಷ್ ವಾಹಿನಿಯಿಂದ ನಿರ್ಗಮಿಸುವ ಮನಸ್ಸಾಯಿತು, ರಾಜಿನಾಮೆ ನಿರ್ಧಾರವನ್ನು ಕೊನೆಗೂ ತಿಳಿಸಿದೆ, ಸ್ವಂತ ಕುಟುಂಬದ ಸದಸ್ಯರಂತೆ ಪ್ರೀತಿಸುವ ಸಹೋದ್ಯೋಗಿಗಳನ್ನು ಬಿಟ್ಟು ತೆರಳುವುದು ಕೊಂಚ ಕಷ್ಟದ ವಿಚಾರವೇ, ಆದರೇನು ಮಾಡಲಿ, ನಿರ್ಧಾರ ಕೈಗೊಂಡಾಗಿದೆ, ನಾನು ಸಾಧಿಸಬೇಕಾದ ಕಾರ್ಯ ಬಹಳಷ್ಟಿವೆ, ಇರುವುದು ಅಲ್ಪ ಸಮಯ ಅದರಲ್ಲಿ ಏನಾದರೂ ಸಾಧನೆ ಮಾಡುವ ಹಂಬಲ..
ಈ ಆಯುಷ್ ವಾಹಿನಿಯ ಪಯಣದಲ್ಲಿ ನನ್ನೊಂದಿಗೆ ನನ್ನವರೆಂದು ಇದ್ದವರು, ಶಮಾ ಮೇಡಂ. ನನ್ನೊಲವಿನ ರಂಜಿನಿ ಮೇಡಂ, ನಾಗೇಂದ್ರನ್ ಸರ್, ಪ್ರಸನ್ನ ಸರ್, ದುರ್ಗಾಧರನ್ ಸರ್, ಸುಂದರಮ್ ಸರ್, ಇಂಚರಾ, ತಲ್ವಾರ್ ಸರ್,ಭಾರತಿ ಮೇಡಂ ಉಮೇಶ್, ಮಂಜು ಸರ್ ಸುಬ್ಬು ಸರ್, ಸತೀಶ್ ಸರ್, ಸಂಧ್ಯಾ ಮೇಡಂ, ಭರತ್ ಸರ್, ಮನೀಷಾ, ಬಾಲಾಜಿ ಸರ್, ಶ್ರೀಕಾಂತ್ ಸರ್ ಇವರೆಲ್ಲರಿಗೂ ಕೃತಜ್ಞತಾಪೂರ್ವಕ ಧನ್ಯವಾದ..
ಭೂಮಿ ಇಲ್ಲ ಚೌಕಾಕಾರ
ಇರುವುದು ಅದು ಗೋಲಾಕಾರ..
ಈ ಗೋಳು ತುಂಬಿದ ಗೋಲಿಯಲ್ಲಿ
ನಾವೆಲ್ಲರೂ ಭೇಟಿಯಾಗಲೇ ಬೇಕು
ಒಂದಲ್ಲಾ ಒಂದು ದಿನ ಭೇಟಿ
ಖಂಡಿತಾ.. ಆದರೆ ಆ ಭೇಟಿಯಲ್ಲಿ ನಾ ಹೇಳುವ ಒಂದೇ ಮಾತು
“ ಜೀವನದ ಹಾದಿ ತೋರಿದ ನಿಮಗೆಲ್ಲಾ ಪ್ರೀತಿಯ ಧನ್ಯವಾದ”

ಸಾಧನೆಯ ಹಾದಿಯಲ್ಲಿ ಕಷ್ಟಗಳು ಸರ್ವೇ ಸಾಮಾನ್ಯ, ಕಷ್ಟ ಬದುಕುವುದನ್ನು ಕಲಿಸುತ್ತದೆ.. ಪಟ್ಟ ಕಷ್ಟವನ್ನೇ ಆತ್ಮವಿಶ್ವಾಸದ ಕೀಲಿ ಕೈಯಾಗಿ ತೆಗೆದುಕೊಂಡರೆ, ಗೆಲುವು ಕಣ್ಮುಂದೆ ಗೋಚರಿಸುತ್ತದೆ, ಇನ್ನಷ್ಟು ಸುಂದರ ಕನಸುಗಳು ತೆರೆದುಕೊಳ್ಳುತ್ತದೆ.. all the best ಶಿಷ್ಯಾ
ReplyDelete