Nanna Jeevada Maatu
Friday, 19 July 2024
ಪ್ರೀತಿ.. ಪ್ರೇಮ... ಮನೊಕಾಮನೆ..... ಒಂದು ಜೋಡಿಯ ಸುತ್ತ...!
Saturday, 24 September 2022
ಮತ್ತೆ ನೆನಪಾಗಬೇಕಿದೆ ರಾಣಿ ಚೆನ್ನಭೈರಾದೇವಿ...!!! ಇತಿಹಾಸವೂ ಮರೆತ ರಾಣಿಯ ಪೌರುಷದ ಕಥೆಯಿದು..!
ಕೆಲವೊಮ್ಮೆ ಭಾರತದಲ್ಲಿ ಆಳ್ವಿಕೆ ನಡೆಸಿದ ಸರ್ಕಾರಗಳ ಮೇಲೆ ನಿಜವಾಗಿಯೂ ಜಿಗುಪ್ಸೆ ಬಂದು ಬಿಡುತ್ತದೆ. ವಿದೇಶಗಳಲ್ಲಿರುವಂತೆ ಭಾರತದಲ್ಲಿ ಇತಿಹಾಸವನ್ನು ಸಂರಕ್ಷಿಸಿ ಇಡುತ್ತಿಲ್ಲವಲ್ಲ ಎಂದು ಬೇಸರವಾಗುತ್ತದೆ. ಭಾರತದಲ್ಲಿ ಇತಿಹಾಸದ ಬಗ್ಗೆ ಯಾವ ಮಟ್ಟಿಗೆ ತಾತ್ಸಾರ ಇದೆ ಅಂದ್ರೆ ಇತಿಹಾಸ ಅಂದ್ರೆ ಕೇವಲ ಗಾಂಧಿ, ಮೊಘಲ್ ವಂಶ, ಆದಿಲಶಾಹಿಗಳು, ಟಿಪ್ಪು ಸುಲ್ತಾನ.. ಇಷ್ಟೇ...!!!!!
ಆದ್ರೆ ಅದಕ್ಕೂ ಮೀರಿದ ಹಲವು ಐತಿಹಾಸಿಕ ಕುರುಹುಗಳು ಭಾರತದಲ್ಲಿ ಇದೆ ಅಂದರೆ ನಂಬಲೇಬೇಕು..!!
ನಿಮ್ಮಲ್ಲಿ ನೀವು ಪ್ರಶ್ನೆ ಮಾಡಿಕೊಳ್ಳಿ, ಗೇರುಸೊಪ್ಪೆಯಲ್ಲಿ ರಾಣಿ ಚೆನ್ನಭೈರಾದೇವಿ ಎಂಬವಳು ಒಬ್ಬಳು ಇದ್ದಳು ಎಂದು ನಮ್ಮ ನಿಮ್ಮೆಲ್ಲರಲ್ಲಿ ಅದೆಷ್ಟು ಜನರಿಗೆ ಗೊತ್ತು..?
ಹೌದು ರಾಣಿ ಚೆನ್ನಭೈರಾದೇವಿಯ ಇತಿಹಾಸ ನನಗೂ ಗೊತ್ತಿಲ್ಲ ಆದ್ರೆ ಪ್ರಾಯಶಃ ನಾನು ದಿಗ್ವಿಜಯ ವಾಹಿನಿಯಲ್ಲಿ ಕೆಲಸ ಮಾಡ್ತಿದ್ದಾಗ ನನ್ನ ಜತೆ ಕೆಲಸ ಮಾಡ್ತಿದ್ದ ಶೈಲಜಾ ಅವರು ಚೆನ್ನಭೈರಾದೇವಿಯ ಬಗ್ಗೆ ಕಥೆಗಳನ್ನ ಹೇಳ್ತಾ ಇದ್ರು. ಆ ಕಥೆಗಳನ್ನ ಕೇಳ್ತಾ ಇದ್ರೆ ಮೈ ರೋಮಾಂಚನ ಅನ್ನಿಸೋದು. ಒಬ್ಬ ರಾಣಿ ಪೋರ್ಚುಗೀಸರು, ಕೆಳದಿ ಅರಸರು, ಬಿಜಾಪುರದ ಸುಲ್ತಾನರ ಆಳ್ವಿಕೆಯ ನಡುವೆಯೇ 54 ವರ್ಷಗಳ ಕಾಲ ಆಳ್ವಿಕೆ ನಡೆಸಿದ್ದಳು ಎಂದರೆ ನಿಜವಾಗಿಯೂ ನಂಬಲು ಅಸಾಧ್ಯ..!
ಇತಿಹಾಸದ ಪ್ರಕಾರ ವಿಜಯನಗರದ ಸಾಳುವ ವಂಶದ ಒಂದು ಶಾಖೆಯ ಅರಸರು ಗೇರುಸೊಪ್ಪೆಯನ್ನು ಆಳುತ್ತಿದ್ದರೆ ಮತ್ತೊಂದು ವಂಶದವರು ಹಾಡುವಳ್ಳಿಯನ್ನು ಆಳುತ್ತಿದ್ದರು. ಗೇರುಸೊಪ್ಪೆಯ ಅರಸ ಇಮ್ಮಡಿ ದೇವರಾಯ (1515-50) ಪೋರ್ಚುಗೀಸರ ಮೇಲೆ ಯುದ್ಧಮಾಡಿದ. ಮಡಗೋವೆಯ ಬಳಿ ೧೫೪೨ರಲ್ಲಿ ನಡೆದ ಭೀಕರ ಯುದ್ಧದಲ್ಲಿ ಆತ ಸೋಲನ್ನಪ್ಪಿದ ಬಳಿಕ ಪೋರ್ಚುಗೀಸರು ಆತನ ರಾಜಧಾನಿ ಭಟ್ಕಳವನ್ನು ಸುಟ್ಟು ಹಾಕಿದರು. ಆತನ ಪತ್ನಿ ಚೆನ್ನಾದೇವಿಯ ತಂಗಿಯೇ ಚೆನ್ನಭೈರಾದೇವಿ. ಪೋರ್ಚುಗೀಸರ ಜೊತೆಗಿನ ಒಪ್ಪಂದದಂತೆ ಕಪ್ಪವನ್ನು ಕೊಡಲಿಲ್ಲವೆಂದೂ, ಮಹಮದೀಯರ ಹಡಗುಗಳಿಗೆ ಭಟ್ಕಳ ಬಂದರಿನಲ್ಲಿ ಆಶ್ರಯ ಕೊಟ್ಟಿರುವಳೆಂದು ಆರೋಪಿಸಿ, ಪೋರ್ಚುಗೀಸ್ ಕಪ್ತಾನ ಆಲ್ಫನ್ಸೋ ಡಿಸೋಜಾ ಭಟ್ಕಳದ ಮೇಲೆ ದಾಳಿ ಮಾಡಿ ರಾಣಿಯನ್ನು ಸೋಲಿಸಿ ಭಟ್ಕಳವನ್ನು ಸುಟ್ಟುಹಾಕಿದ. ಅಕ್ಕನ ನಂತರ ತಂಗಿ ಚೆನ್ನಭೈರಾದೇವಿಗೆ ಹಾಡುವಳ್ಳಿಯ ಜೊತೆಗೆ ಗೇರುಸೊಪ್ಪೆಯ ಅಧಿಕಾರವೂ ದೊರಕಿತು.
ಚೆನ್ನಭೈರಾದೇವಿ ದಕ್ಷಿಣ ಗೋವಾದಿಂದ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಭಟ್ಕಳ, ಮಲ್ಪೆ,ಹೊನ್ನಾವರ, ಮಿರ್ಜಾನ್, ಅಂಕೋಲಾ, ಬೈಂದೂರು, ಕಾರವಾರಗಳಲ್ಲಿ ಆಳ್ವಿಕೆ ನಡೆಸುತ್ತಿದ್ದಳು ಎಂಬ ಮಾಹಿತಿ ಇದೆ. ಕರಾವಳಿಯ ಈ ಪ್ರಾಂತ್ಯಗಳ ಜತೆ ಘಟ್ಟದ ಮೇಲಿನ ಭಾರಂಗಿ, ಮರಬಿಡಿ, ಕರೂರು,ಹನ್ನಾರ, ಬಿದನೂರು, ಸೌಳನಾಡು, ಆವಿನಹಳ್ಳಿ ಸೀಮೆಗಳು ಚೆನ್ನಭೈರಾದೇವಿಯ ಆಡಳಿತಕ್ಕೆ ಒಳಪಟ್ಟಿದ್ದವು ಎಂದು ಹೇಳಲಾಗುತ್ತಿದೆ. ಚೆನ್ನಭೈರಾದೇವಿಯ ಆಳ್ವಿಕೆಯ ಅವಧಿಯಲ್ಲಿ ಯುರೋಪಿನ ರಾಷ್ಟ್ರಗಳಿಗೆ ಕಾಳುಮೆಣಸು, ದಾಲ್ಚಿನ್ನಿ, ಅಡಿಕೆ, ಶುಂಠಿ, ಗಂಧಗಳನ್ನು ರಫ್ತು ಮಾಡಲಾಗುತ್ತಿತ್ತಂತೆ.
ಚೆನ್ನಭೈರಾದೇವಿಯ ಕಾಲದ ಮಿರ್ಜಾನ್ ಕೋಟೆ, ಕಾನೂರು ಕೋಟೆಗಳು ಈಗಲೂ ಕಾಣಬಹುದು ಆದ್ರೆ ಕಾಡಿನ ನಡುವೆ ಇರುವ ಈ ಕೋಟೆ ಸರಿಯಾದ ನಿರ್ವಹಣೆ ಇಲ್ಲದೇ ಪಾಳುಬಿದ್ದಿದೆ. ಪೋರ್ಚುಗೀಸರ ಮತಾಂತರದಿಂದ ತಪ್ಪಿಸಿಕೊಳ್ಳಲು ಚೆನ್ನಭೈರಾದೇವಿಯ ರಾಜ್ಯಕ್ಕೆ ಆಶ್ರಯ ಕೋರಿ ಬಂದ ಸಾರಸ್ವತ ಬ್ರಾಹ್ಮಣರು ಮತ್ತು ಕೊಂಕಣಿಗರಿಗೆ ರಾಣಿ ಚೆನ್ನಭೈರಾದೇವಿ ತನ್ನ ರಾಜ್ಯದಲ್ಲಿ ಆಶ್ರಯ ನೀಡಿದ್ದಳು ಎಂದು ಹೇಳಲಾಗ್ತಿದೆ. ಜೈನ ಮತದವಳಾದ ರಾಣಿ ಅನೇಕ ಶೈವ, ವೈಷ್ಣವ ಮತ್ತು ಶಕ್ತಿ ದೇಗುಲಗಳನ್ನು ಕಟ್ಟಲು, ಜೀರ್ಣೋದ್ದಾರಕ್ಕೂ ನೆರವು ನೀಡಿದ್ದಳು ಎಂದು ಹೇಳಲಾಗುತ್ತಿದೆ . ಬಿದರೂರು ಅಥವಾ ವೇಣುಪುರದ ಯೋಗಾನರಸಿಂಹ ಸ್ವಾಮಿ ದೇಗುಲ ಮತ್ತು ವರ್ಧಮಾನ ಬಸದಿಗಳ ಜೀರ್ಣೋದ್ದಾರಕ್ಕೂ ರಾಣಿ ಚೆನ್ನಭೈರಾದೇವಿ ನೆರವು ನೀಡಿದ್ದಳು. "ಕರ್ನಾಟಕ ಶಬ್ದಾನುಶಾಸನ " ಎಂಬ ವ್ಯಾಕರಣ ಗ್ರಂಥ ರಚನಾಕಾರ, ಸ್ವಾದಿ ದಿಗಂಬರ ಜೈನ ಮಠದ ಯತಿ ಅಭಿನವ ಭಟ್ಟಾಕಲಂಕರು ಈ ರಾಣಿಯ ಆಶ್ರಯದಲ್ಲಿದ್ದರು ಎಂಬ ಐಹಿತ್ಯವಿದೆ.
ರಾಣಿ ಚೆನ್ನಭೈರಾದೇವಿಯ ಆಳ್ವಿಕೆಯ ಕಾಲದಲ್ಲಿ ಈಗಿನ ಕೇರಳದ ಕೊಚ್ಚಿನ್ ಬಂದರು ಪೋರ್ಚುಗೀಸರ ಆಳ್ವಿಕೆಗೆ ಒಳಪಟ್ಟಿತ್ತು. ಕೊಚ್ಚಿನ್ ಬಂದರಿನ ಕ್ಯಾಪ್ಟನ್ ಪೋರ್ಚುಗಲ್‌ನ ಆಲ್ಫೋನ್ಸೋ ಮೆಕ್ಸಿಯ ಎಂಬ ಪ್ರಾಂತ್ಯದ ರಾಜನಿಗೆ ಬರೆದ ಪತ್ರದಲ್ಲಿ "ಬಟಿಕಳ(ಭಟ್ಕಳ) ಮತ್ತು ಗೋವಾಗಳ ನಡುವೆ ಒನೋರ್(ಕಾನೂರು),ಮರ್ಜೆನ್(ಮಿರ್ಜಾನ್) ಮತ್ತು ಅಂಕೋಲಾಗಳೆಂಬ ಜಾಗಗಳಿವೆ. ಅವುಗಳಿಂದ ವಾರ್ಷಿಕ ೫೦೦೦ ಕ್ರೂಜೇಡೋಸ್(ಹದಿನೈದನೆದ ಶತಮಾನದಲ್ಲಿದ್ದ ಪೋರ್ಚುಗೀಸ್ ಬಂಗಾರದ ನಾಣ್ಯ)ಗಳಷ್ಟು ಕಾಳು ಮೆಣಸು ವಾರ್ಷಿಕವಾಗಿ ರಫ್ತಾಗುತ್ತಿದೆ ಎಂದು ನಾನು ಕೇಳಿದ್ದೇನೆ. ಈ ಜಾಗಗಳು ಗೇರುಸೊಪ್ಪೆಯ ರಾಣಿ(ಚೆನ್ನಭೈರಾದೇವಿ)ಯ ಆಳ್ವಿಕೆಗೆ ಒಳಪಟ್ಟಿದೆ. ಈ ಕಾಳುಮೆಣಸು ಕೊಚ್ಚಿನ್ನಿನ ಕಾಳುಮೆಣಸಿಗಿಂತ ದಪ್ಪವೂ, ಕಮ್ಮಿ ತೂಕ ಮತ್ತು ಖಾರದ್ದೂ ಆಗಿವೆ. ಈ ಜಾಗಗಳನ್ನು ನಮ್ಮ ವಶಕ್ಕೆ ಪಡೆಯಬೇಕು" ಎಂದು ಬರೆಯುತ್ತಾನೆ. ಆ ಬಳಿಕ 1606ರಲ್ಲಿ ಕೆಳದಿ ಮತ್ತು ಬಿಳಗಿಯ ಅರಸರು ಒಟ್ಟು ಸೇರಿ ಗೇರುಸೊಪ್ಪೆಯ ಮೇಲೆ ಆಕ್ರಮಣ ಮಾಡುತ್ತಾರೆ. ಈ ಸಂದರ್ಭದಲ್ಲಿ ನಡೆದ ಯುದ್ಧದಲ್ಲಿ ತನ್ನ ಸೇನಾಧಿಪತಿ ಗೊಂಡನಾಯಕನ ಮೋಸದಿಂದಾಗಿ ರಾಣಿ ಚೆನ್ನಭೈರಾದೇವಿ ಸೋಲುತ್ತಾಳೆ. ಈ ಸೋಲಿನ ಬಳಿಕ ಗೇರುಸೊಪ್ಪೆ ಕೆಳದಿ ಸಾಮ್ರಾಜ್ಯದ ಭಾಗವಾಗುತ್ತದೆ ಎಂದು ಉಲ್ಲೇಖಿಸಲಾಗಿದೆ.
ಇವಿಷ್ಟು ಮಾತ್ರವಲ್ಲದೇ ರಾಣಿ ಚೆನ್ನಭೈರಾದೇವಿ ತನ್ನ ಆಳ್ವಿಕೆಯ ಕಾಲದಲ್ಲಿ ಅನೇಕ ಯುದ್ಧಗಳನ್ನು ನಡೆಸಿದ್ದರು ಎಂದು ಹೇಳಲಾಗಿದೆ. 1559 ಮತ್ತು 1570ರಲ್ಲಿ ಪೋರ್ಚುಗೀಸರ ವಿರುದ್ಧ ನಡೆದ ಯುದ್ಧಗಳಲ್ಲಿ ರಾಣಿ ಚೆನ್ನಭೈರಾದೇವಿ ಗೆಲುವು ಸಾಧಿಸಿದ್ದಳು ಎಂದು ಹೇಳಲಾಗಿದೆ. ಇದಷ್ಟೇ ಅಲ್ಲದೇ 1671ರಲ್ಲಿ ನಡೆದ ಯದ್ಧದ ಸಂಯುಕ್ತ ಸೇನೆಯ ನಾಯಕತ್ವವನ್ನು ರಾಣಿ ಚೆನ್ನಭೈರಾದೇವಿ ವಹಿಸಿದ್ದಳು ಎಂದು ಹೇಳಲಾಗುತ್ತಿದೆ, ಈ ಸಂಯುಕ್ತ ಸೇನೆಗೆ ಗುಜರಾತ್, ಬೀದರ್‌ನ ಸುಲ್ತಾನರ ಬಿಜಾಪುರದ ಆದಿಲ್‌ಶಾಹಿಗಳು ಹಾಗೂ ಕೇರಳದ ಜಾಮೋರಿನ್ ದೊರೆಗಳನ್ನು ಒಳಗೊಂಡಂತೆ ಹಲವು ರಾಜರು ಈ ಸಂಯುಕ್ತ ಸೇನೆಯಲ್ಲಿದ್ದರು ಎಂಬ ಉಲ್ಲೇಖವಿದೆ.
ಈ ಕರುನಾಡಿನ ಹೆಮ್ಮೆಯ ರಾಣಿಯ ಕುರಿತಾಗಿ ವಿದೇಶದಲ್ಲಿರುವ ಕೃತಿಗಳಲ್ಲಿ ಉಲ್ಲೇಖಗಳಿವೆ. ಅಮೆರಿಕದ ಟೆಕ್ಸಾಸ್ ವಿಶ್ವವಿದ್ಯಾನಿಲಯದ ಆಂಗ್ಲಭಾಷಾ ಪ್ರಾಧ್ಯಾಪಕಿ ಮತ್ತು ದಕ್ಷಿಣ ಏಷ್ಯಾ ಇನ್ಸ್ಟಿಟ್ಯೂಟಿನಲ್ಲಿ ತೌಲನಿಕ ಸಾಹಿತ್ಯ ಮುಖ್ಯಸ್ಥೆಯಾಗಿರುವ ಹನ್ನಾಚಾಪೆಲ್ಲೆ ವೋಜಿಹೋಸ್ಕಿ ತಮ್ಮ ಪ್ರಬಂಧಗಳಲ್ಲಿ ರಾಣಿ ಚೆನ್ನಭೈರಾದೇವಿಯ ಸಾಹಸಗಳನ್ನು ಉಲ್ಲೇಖಿಸಿದ್ದಾರೆ. "ರಾಣಿ ಚೆನ್ನಭೈರಾದೇವಿಯೂ ಇಂಗ್ಲೆಂಡ್ ರಾಣಿ ಎಲಿಜಬೆತ್‌ರ ಸಮಕಾಲೀನರು ಮತ್ತು ಅನೇಕ ವಿಚಾರಗಳಲ್ಲಿ ರಾಣಿ ಎಲಿಜಬೆತ್‌ಗೂ ಮಿಗಿಲಾದವರು, ತನ್ನ ಚಾಣಾಕ್ಷತನದ ಮೈತ್ರಿಗಳು ಮತ್ತು ತನ್ನ ಸಾಂಸ್ಕೃತಿಕ, ಆರ್ಥಿಕ, ರಾಜಕೀಯ ಮೇಲುಗೈಯನ್ನ ಬಿಟ್ಟುಕೊಡದೇ ಸಮರ್ಥವಾಗಿ ಆಳ್ವಿಕೆ ನಡೆಸಿದ್ದಳು" ಎಂದು ಬರೆದಿದ್ದಾರೆ. ಇಷ್ಟು ಮಾತ್ರವಲ್ಲದೇ 1623ರಲ್ಲಿ ಭಾರತಕ್ಕೆ ಬಂದ ಪೋರ್ಚುಗೀಸ್ ಪ್ರವಾಸಿಗ ಪೀಟ್ರೋ ಡೆಲ್ಲಾವಿಲ್ಲೆ ಚೆನ್ನಭೈರಾದೇವಿಯ ಕಥೆಗಳನ್ನು ತನ್ನ ಸಾಹಸ ಕಥನಗಳಲ್ಲಿ ದಾಖಲಿಸುತ್ತಾನೆ.
ಯುದ್ಧದಲ್ಲಿ ರಾಣಿ ಚೆನ್ನಭೈರಾದೇವಿಯನ್ನು ಮೋಸದಲ್ಲಿ ಸೆರೆಹಿಡಿದ ಕೆಳದಿ ನಾಯಕ ವೆಂಕಟಪ್ಪನಾಯಕ ಆಕೆಯನ್ನ ಸಾವಿನವರೆಗೂ ನಗಿರೆಯ ಸೆರೆಮನೆಯಲ್ಲಿ ಹಿಡಿದಿಟ್ಟಿದ್ದ ಮತ್ತು ತನಗೆ ಸಹಾಯ ಮಾಡಿದ ಗೊಂಡನಾಯಕನನ್ನು ವೆಂಕಟಪ್ಪನಾಯಕ ಕೊಲ್ಲಿಸಿದ ಎಂದು ಇತಿಹಾಸಕಾರ, ಲೇಖಕ, ಡಾ | ಗಜಾನನ ಶರ್ಮ ತಮ್ಮ ಪುಸ್ತಕ ಚೆನ್ನಭೈರಾದೇವಿಯಲ್ಲಿ ಉಲ್ಲೇಖಿಸುತ್ತಾರೆ. ಅದೇನೆ ಇರಲಿ ಪೋರ್ಚುಗೀಸರಿಗೆ ಸಿಂಹಸ್ವಪ್ನವಾಗಿದ್ದ ರಾಣಿ ಚೆನ್ನಭೈರಾದೇವಿಯ ಬಗ್ಗೆ ನಮ್ಮಲ್ಲೇ ಅನೇಕರಿಗೆ ತಿಳಿಯದಿರುವುದು ವಿಪರ್ಯಾಸವೇ ಸರಿ.!!! ಆಕೆ ಕಟ್ಟಿಸಿದ ಕಾನೂರಿನ ಕೋಟೆ ಇಂದಿಗೂ ಪಾಳುಬಿದ್ದು ನಿಧಿಯ ಆಸೆಗೆ ನಿಧಿ ಚೋರರ ಅತಿಯಾಸೆಗೆ ಹಾಳಾಗಿ ಹೋಗಿದೆ. ಮತ್ತು ಅಲ್ಲಿನ ವಿಗ್ರಹಗಳೆಲ್ಲವೂ ಅಳಿವಿನ ಅಂಚಿಗೆ ಹೋಗಿದೆ. ಇನ್ನಾದರೂ ಸರ್ಕಾರ ಎಚ್ಚೆತ್ತು ಅಭಿವೃದ್ಧಿಗೆ ನಾಂದಿ ಹಾಡಬೇಕಿದೆ.
Thursday, 5 May 2022
ಬದುಕು... ಬದಲಾಗದೇ...?? ಬಣ್ಣವೂ ಬರಲಾರದೇ?
Wednesday, 7 October 2020
ಬೆಂಗಳೂರಲ್ಲೊಬ್ಬ ಮಿತ್ರದ್ರೋಹಿ
ಬೆಂಗಳೂರಿನ ಕಾಂಕ್ರೀಟ್ ಕಾಡುಗಳ ನಡುವೆ ಅಂದು ಎಂದಿಂತೆ ಬೆಳಗಾಗಿತ್ತು, ಎದ್ದು ತನ್ನೆಲ್ಲಾ ಕೆಲಸಗಳನ್ನು ಮುಗಿಸಿದ ಮೌನಿಯು, ಇನ್ನೇನು ಸ್ನಾನಕ್ಕೆ ನೀರು ಬಿಸಿ ಮಾಡಹೊರಟಿದ್ದ ಅಷ್ಟರಲ್ಲೇ ಆತನ ಮೊಬೈಲ್ ಗುಂಯ್‌ಗುಡುತ್ತಿತ್ತು. ಮಬೈಲ್ ಕೈಗೆತ್ತಿಕೊಂಡು ಹಲೋ ಅಂದಾಗ ಅತ್ತ ಕಡೆಯಿಂದ ಹಲೋ ಮೌನಿ ನಾನು ಆದಿ ಕಣೋ, ಅದೇ ನಿನ್ನ ರೂಂ ಮೇಟ್ ನ ಫ್ರೆಂಡ್, ನಾನು ಬೆಂಗಳೂರಿಗೆ ಬಂದಿದ್ದೇನೆ ಕಣೋ , ನಿನ್ ರೂಂ ಮೇಟ್ ಗೂ ಹೇಳಿದಿನಿ ಒಂದು ದಿನ ರೂಂ ನಲ್ಲಿ ಇರುತ್ತೇನೆ ದಯವಿಟ್ಟು ಅವಕಾಶ ಮಾಡಿಕೊಡೋ ಅಂದ, ಸರಿನಪ್ಪಾ.. ಎಂದು ಹೇಳಿ ನಾನು ಫೋನ್ ಇಟ್ಟು, ಸ್ನಾನಕ್ಕೆ ಅಣಿಯಾದೆ, ಸ್ನಾನ ಮುಗಿಸಿ ಬಳಿಕ ಕೀಯನ್ನು ಕಿಟಕಿಯ ಬಳಿ ಇಟ್ಟು ಆಫೀಸಿಗೆ ಹೊರಟೆ.
ಆಫೀಸಿನಲ್ಲಿ ಕೆಲಸದ ಒತ್ತಡಗಳ ನಡುವೆ ಮುಳುಗಿದ್ದಾಗಲೇ ಮತ್ತೊಮ್ಮೆ ಫೋನ್ ರಿಂಗಣಿಸಿತು, ಹಲೋ ಮೌನಿ ನಾನು ಆದಿ ಎನ್ನುವ ಅತ್ತ ಕಡೆಯ ದನಿ, ಹಾ ಹೇಳಪ್ಪಾ ಎಂದು ನಾನು ಮಾತು ಮುಂದುವರೆಸಿದೆ. ಲೋ ರೂಂ ಕೀಎಲ್ಲಿಟ್ಟಿದ್ದೀಯಾ ಎಂದು ಕೇಳಿದ್ದಕ್ಕೆ ಅಲ್ಲೇ ಕಿಟಕಿಯ ಬಳಿಯಲ್ಲಿ ಇಟ್ಟಿದ್ದೇನೆ ನೋಡು ಎಂದೆ. ಆಯ್ತು ಎಂದು ಫೋನ್ ಇಟ್ಟ. ನಾನು ನನ್ನ ಕೆಲಸಗಳಲ್ಲಿ ಬಿಝಿಯಾಗಿಬಿಟ್ಟೆ.
ಸಂಜೆ ಕೆಲಸ ಮುಗಿಸಿ ಆಫೀಸ್ ಬಳಿ ಒಂದು ಭೇಲ್ ಪುರಿ ತಿಂದು, ರೂಂ ಕಡೆ ಹೊರಟೆ. ರೂಂ ತಲುಪಿ ಆದಿಯನ್ನು ಮಾತನಾಡಿಸುತ್ತಾ, ಊಟವಾಯಿತೇ ಎಂದು ಕೇಳಿದೆ. ಅದಕ್ಕಾತ ಇಲ್ಲ ಕಾಸಿರಲಿಲ್ಲ ಎಂದ. ಕೂಡಲೇ ಅಯ್ಯೋ ಎಂದೆನಿಸಿತು, ಒಂದೈವತ್ತು ರುಪಾಯಿಗಳನ್ನು ಕೊಟ್ಟು ಆತನಿಗೆ ಊಟಮಾಡಲು ಹೇಳಿದೆ. ಬಳಿಕ ನನ್ನ ಮನದರಸಿಗೆ ಕೆಲ ಕಾಲ ಮೆಸೇಜಿಸಿ ಮಲಗಿ ಬಿಟ್ಟೆ,
ಮರುದಿನ ಮತ್ತದೇ ಕಾರ್ಯ... ಬೆಳಗ್ಗೆ ಎದ್ದು ನನ್ನ ದೈನಂದಿನ ಕಾರ್ಯ ಮುಗಿಸಿ ಆಫೀಸಿಗೆಂದು ಹೊರಟೆ.. ಆದಿ ಇನ್ನೂ ಎದ್ದಿರಲಿಲ್ಲ, ನಾನು ಆಫೀಸಿಗೆ ಹೋಗಿ ಸಂಜೆ ಬರುತ್ತೇನೆಂದು ಆತನಿಗೆ ಹೇಳಿ ಹೊರಟೆ...
ಆಫೀಸಿಗೆ ಕೊಂಚ ಬೇಗನೇ ಬಂದ ನಾನು ಆಫೀಸಿನ ಕಾರ್ಯಗಳಲ್ಲಿ ಬ್ಯಸಿಯಾದೆ, ಅಂದು ಸ್ವಲ್ಪ ಹೆಚ್ಚೇ ಕೆಲಸದ ಒತ್ತಡವಿದ್ದುದರಿಂದ ನನಗೆ ರೂಮಿಗೆ ಹೋಗುವುದು ಕೊಂಚ ತಡವಾಗಿತ್ತು. ಅದಾಗಲೆ ಸಮಯ ರಾತ್ರಿ ೧೦ ಆಗಿತ್ತು , ರೂಮಿನತ್ತ ನಡೆದ ನನಗೆ ಒಂದು ದೊಡ್ಡ ಆಶ್ಚರ್ಯವೇ ಕಾದಿತ್ತು ,ಅಯ್ಯಾ ಬಾಗಿಲು ತೆರೆದೇ ಇದೆ, ಲೈಟುಗಳು ಆನ್ ಇದೆ, ನನ್ನ ರೂಂ ಮೇಟ್ ನ ಗೆಳೆಯನ ಪತ್ತೆಯೇ ಇಲ್ಲ.. ಕೊಂಚ ಹೊತ್ತು ಕಾದ ಬಳಿಕ ಅತ್ತಿತ್ತ ನೋಡಿದರೆ ನನ್ನ ಎರಡು ಅಂಗಿಗಳು ಕಾಣುತ್ತಿಲ್ಲ, ರೂಂ ಮೇಟ್ ನ ಸೂಟ್‌ಕೇಸ್ ಕಾಣುತ್ತಿಲ್ಲ, ವಾಟರ್ ಹೀಟರ್ ಹಾಗೂ ಪಾತ್ರೆಗಳೆಲ್ಲವೂ ನಾಪತ್ತೆ. ನೊಡಿ ಶಾಕ್ ಆಯಿತಾದರೂ ರೂಂ ಮೇಟ್ ಗೂ ಹಾಗೂ ಆತನ ಗೆಳೆಯನಿಗೂ ಫೋನಾಯಿಸಿದರೆ, ರೂಂ ಮೇಟ್ ಗೆ ಆತ ಬಂದಿರುವ ವಿಚಾರವೇ ಗೊತ್ತಿಲ್ಲ, ಆದಿಗೆ ಫೋನಾಯಿಸಿದರೆ ಆತ ಕರೆ ಸ್ವೀಕರಿಸುತ್ತಿಲ್ಲ. ಅಲ್ಲಿಗೆ ಅರ್ಥವಾಯಿತು ಆದಿ ಕಳ್ಳತನದ ಉದ್ದೇಶದಿಂದಲೇ ರೂಮಿಗೆ ಬಂದಿದ್ದ ಎಂದು, ಇನ್ನು ಮಾತನಾಡಿ ಏನು ಪ್ರಯೋಜನ ಎಂದು ತೆಪ್ಪಗೆ ಮಲಗಿದೆ..
Thursday, 13 February 2020
ಇಷ್ಟೇ ರೀ… ಪತ್ರಕರ್ತನ ಬಾಳು..
Sunday, 5 January 2020
ಮನ್ಸಿಂದ ಯಾರೂನೂ ಕೆಟ್ಟೋರಲ್ಲ…
ಮೌನವೇ ಹಿತ.. ಮಾತು ಮನೆ ಕೆಡಿಸಬಾರದಲ್ಲ…
ಕೊನೇ ಮಾತು…
ಮನ್ಸಿಂದ ಯಾರೂನೂ ಕೆಟ್ಟೋರಲ್ಲ…
Sunday, 17 November 2019
ದೇವರು ಕೊಟ್ಟ ಪ್ರೀತಿಯ ಆಸ್ತಿ ಈ ಚೆಲುವೆ....
Wednesday, 13 November 2019
ಬೆಂಗಳೂರೆಂಬ ಹೈಟೆಕ್ ಹಳ್ಳಿ
Tuesday, 12 November 2019
ಒಂದು ಜೀನ್ಸ್ ಪ್ಯಾಂಟಿನ ಕಥೆ…
Thursday, 27 June 2019
ಭಜನಾಮೃತ
ಕಾಲ ಕಳೆಯಿತು ಕೂಡು ಕುಟುಂಬಗಳು ಒಡೆದ ಕುಟುಂಬಗಳಾದವು, ನಾವೆಲ್ಲರೂ ಸೂರ್ಯವಂಶಸ್ತರಾಗಿಬಿಟ್ಟೆವು ಅರ್ಥಾತ್ ಸೂರ್ಯ ಉದಯದ ಬಳಿಕ ನಮ್ಮ ದಿನ ಪ್ರಾರಂಭವಾಗತೊಡಗಿತು, ಮನೆಯಲ್ಲಿ ಗಂಟೆಯ ಸದ್ದಿಲ್ಲ ಏನೂ ಇಲ್ಲ.. ಹಿರಿಯ ಜೀವಗಳಿಗೆ ಬೆಲೆಯೂ ಇಲ್ಲದಂತಾಯಿತು. ದಿನನಿತ್ಯ ಮನೆಮಂದಿಯೆಲ್ಲಾ ಕೂಡಿ ಮಾಡುತ್ತಿದ್ದ ಭಜನೆಗಳು ಶುಕ್ರವಾರಕ್ಕೆ ಸೀಮಿತವಾಯಿತು. ಆದರೆ ಒಂದತೂ ಸತ್ಯ ಈಗ ಕೆಲ ಬುದ್ಧಿಜೀವಿಗಳಿದ್ದಾರೆ ಕೇಳುತ್ತಾರೆ, ನಾವ್ಯಾಕೆ ಭಜನೆ ಮಾಡಬೇಕು?? ಭಜನೆ ಮಾಡುವುದರಿಂದ ಏನು ಪ್ರಯೋಜನ ಎಂದು ಆದರೆ ಪ್ರಯೋಜನ ಖಂಡಿತಾ ಇದೆ, ವೈಜ್ಞಾನಿಕವಾಗಿ ಭಜನೆಯ ಮಹತ್ವವನ್ನು ಉಲ್ಲೇಖಿಸಹೊರಟರೆ ಅದಕ್ಕೆ ಒಂದು ನೂರು ಪುಟಗಳು ಸಾಲಬಹುದೇನೋ...
ಭಜನೆಯ ಸಂದರ್ಭದಲ್ಲಿ ಮನೆಮಂದಿಯೆಲ್ಲಾ ಒಟ್ಟಾಗುವುದರಿಂದ ನಾವೆಲ್ಲಾ ಒಂದೇ ಎಂಬ ಭಾವನೆ ಬಂದು ನಾವೆಲ್ಲಾ ಒಗ್ಗೂಡಿ ಇರುತ್ತೇವೆ ಆದ್ದರಿಂದ ಸಮಾಜದಲ್ಲಿ ಒಡಕಿಗೆ ಆಸ್ಪದವಿರುವುದಿಲ್ಲ
ಭಜನೆಯಿಂದ ನಮ್ಮ ಜ್ಞಾಪಕ ಶಕ್ತಿಯೂ ಹೆಚ್ಚಾಗುತ್ತದೆ,
¨ಪ್ರತಿದಿನ ಭಜನೆ ಮಾಡುವುದರಿಂದ ದೇವರ ನಾಮಜಪದೊಂದಿಗೆ ನಾವು ನಮ್ಮತನವನಗ್ನು ಉಳಿಸುವುದರೊಂದಿಗೆ , ಹೆಣ್ಣನ್ನು ಗೌರವವಾಗಿ ಕಾಣುತ್ತೇವೆ
ಆರೋಗ್ಯದ ಮೇಲೂ ಭಜನೆ ಉತ್ತಮ ವಾತಾವರಣ ಕಲ್ಪಿಸುತ್ತದೆ.
ಆದ್ದರಿಂದ ನಮ್ಮ ಸ್ವಾಸ್ಥ್ಯಕ್ಕಾಗಿ ನಮದಮ ಬದುಕಿಗಾಗಿ ನಾವು ಭಜಿಸೋಣ
ಸಮಾಜದ ಉನ್ನತಿಗೆ ಶ್ರಮಿಸೋಣ
ಜೈ ಹಿಂದ್
ಶ್ರೀ ರಾಮಕೃಷ್ಣಾರ್ಪಣಮಸ್ತು
ಇಂತಿ
ಅಕ್ಷಯ್
Tuesday, 25 June 2019
ಓಂ ನಮೋ ಮಾತಾ
ತಾಯಿ ತಾನೇ ಮೊದಲ ಗುರು
ಪ್ರೀತಿ ಪಾಠ ಆಕೆಯಿಂದ ಶುರು
ಅಮ್ಮನ ಹೃದಯದಿ ನನ್ನ ವಿಹಾರ
ಅಮ್ಮನ ನೆನೆದರೆ ಕಷ್ಟಗಳೇ ಪರಿಹಾರ
ಈ ಮಾತು ಎಷ್ಟು ಸತ್ಯ .. ಒಂದು ಮಗು ತೊದಲುತ್ತಾ ಮದಲು ನುಡಿಯುವ ಮಾತೇ ಅಮ್ಮಾ.. ನೋವಿರಲು ಸಂತಸವಿರಲಿ ಮಗುವಿಗೆ ತಿಳಿದಿರುವ ಒಂದೇ ಮಾತು.. ಅಮ್ಮಾ.. ಅಂತೆಯೇ ಬಾಲ್ಯದಲ್ಲಿಯೇ ಮಗುವಿಗೆ ಉತ್ತಮ ಸಂಸ್ಕಾರವನ್ನು ಕಲಿಸುವಲ್ಲಿ ತಾಯಿ ಮಹತ್ತರ ಪಾತ್ರ ವಹಿಸುತ್ತಾಳೆ , ಮಗುವಿನ ಅಕ್ಷರಾಭ್ಯಾಸದಿಂದ ಹಿಡಿದು ಮಗುವಿನ ಸರ್ವತೋಮುಖ ಏಳಿಗೆಯ ವರೆಗೂ ತಾಯಿ ಶಮ ವಹಿಸುತ್ತಾಳೆ ಎಂದರೆ ತಪ್ಪಾಗಲಾರದು.
ಪ್ರಪಂಚದಲ್ಲಿ ಕೆಟ್ಟ ಮಕ್ಕಳು ಹುಟ್ಟಬಹುದು ಆದರೆ ಕೆಟ್ಟ ತಾಯಿ ಇರಲು ಖಂಡಿತವಾಗಿಯೂ ಸಾಧ್ಯವಿಲ್ಲ.. ಒಂಬತ್ತು ತಿಂಗಳು ಗರ್ಭದಲ್ಲಿ ತನ್ನ ಮಗುವನ್ನು ಹೊತ್ತು ತಿರುಗುವ ಮಾತೆ ಎಂದಿಗೂ ತನ್ನ ನೋವಿಗೆ ಬೇಸರಿಸುವವಳಲ್ಲ.. ಇನ್ನು ಮಗುವಿಗೆ ಜನ್ಮ ನೀಡುವಂತಹಾ ಸಂದರ್ಭದಲ್ಲಿ ದೇಹದಲ್ಲಿ ಇರುವ ಎಲ್ಲಾ ಮೂಳೆಗಳು ಮುರಿದು ಹೋಗುವಂತೆ ನೋವಾದರೂ ತಾಯಿ ಮಗುವಿನ ನಗುವಲ್ಲಿ ತನ್ನ ನೋವನ್ನೇಲ್ಲಾ ಮರೆಯುತ್ತಾಳೆ.. ಮಗುವಿನ ನಗುವಲ್ಲಿ ತನ್ನ ಸಂತಸವನ್ನು ಕಾಣುವವಳೇ ತಾಯಿ... ತನಗೆ ಎಷ್ಟೇ ನೋವಾದರೂ ತನಗೆ ಎಷ್ಟೇ ಬೇಸರವಾದರೂ ತನ್ನ ಕಂದಮ್ಮನಿಗೆ ಏನೂ ಆಗಬಾರದೆಂಬಂತೆ ತನ್ನ ಎದೆಯ ಗೂಡಿನಲ್ಲಿ ಬಚ್ಚಿಟ್ಟುಕೊಂಡು ತನ್ನ ಕಂದಮ್ಮನ್ನನ್ನು ಕಾಪಾಡುವವರು ತಾಯಿ ಮಾತ್ರ... ತನ್ನೆಲ್ಲಾ ನೋವನ್ನು ಬದಿಗೊತ್ತಿ ಮಗುವಿನ ಸಾರ್ಥಕ್ಯಕ್ಕಾಗಿ ಜೀವ ಸವೆಸುತ್ತಾಳಲ್ಲಾ ಆ ತಾಯಿ ನಿಜವಾಗಿಯೂ ಪ್ರಶಂಸನಾರ್ಹಳೇ ಸರಿ..
ಅಮ್ಮ ನೀಡುವ ಕೈತುತ್ತು ಅಮೃತವಿದ್ದಂತೆ ಎಂಬ ಮಾತಿದೆ... ಅಮ್ಮನ ಅಡುಗೆ ರುಚಿಯನ್ನು ಯಾವುದೇ 5 ಸ್ಟಾರ್ ಹೋಟೆಲ್ ನೀಡಲಾರದು... ಪ್ರೀತಿಯಿಂದ ತಾಯಿ ನೀಡುವ ಒಂದು ತುತ್ತು ನಮಗೆ ಸ್ವರ್ಗ ಸಮಾನ, ತಾನು ಉಪವಾಸವಿದ್ದರೂ ಪರವಾಗಿಲ್ಲ ತನ್ನ ಮಕ್ಕಳ ಹೊಟ್ಟೆ ತಣ್ಣಗಿರಲಿ ಎಂದು ಭಾವಿಸಲು ತಾಯಿಗೆ ಮಾತ್ರ ಸಾಧ್ಯ.
ಆದರೆ ಇಂದು ಪಾಶ್ಚಿಮಾತ್ಯರ ಅನುಕರಣೆಯಿಂದ ನಾವು ತಾಯಿಯ ಮಹತ್ವವನ್ನೇ ಮರೆತಿದ್ದೇವೆ.. ತನಗೊಂದು ಮಾತು ಬೈದಳೆಂದು ತಾಯಿಯ ಬಳಿ ಮಾತು ಬಿಟ್ಟಂತವರು ನಮ್ಮ ನಡುವೆ ಎಷ್ಟೋ ಜನಗಳಿರಬಹುದು, ತಾನು ಕೇಳಿದ್ದನ್ನು ತಾಯಿ ತೆಗೆದುಕೊಡಲಿಲ್ಲ ಎಂದು ಅತ್ತೂ ಕರೆದು ತಾಯಿಯ ಮೇಲೆ ಕೋಪಿಸಿಕೊಂಡವರೂ ನಮ್ಮ ನಡುವೆ ಇರಬಹುದು. ತಾಯಿ ತನ್ನ ಮಾತನ್ನು ವಿರೋಧಿಸಿದಳೆಂದು ಆಕೆಯ ಮೇಲೆ ಕೈ ಮಾಡಿದ ಎಷ್ಟೋ ಮಂದಿ ನಮ್ಮ ನಡುವಿರಬಹುದು, ಆದರೆ ಇಂತಹಾ ಕೃತ್ಯಗಳನ್ನು ಮಾಡುವ ಮುಂಚೆ ಯೋಚಿಸಿ, ತಾಯಿ ನಿಮ್ಮನ್ನು ಬೆಳೆಸಲು ಪಟ್ಟ ಶ್ರಮವನ್ನು ಒಮ್ಮೆ ನೆನಪಿಸಿ, ನಿಮ್ಮನ್ನು ಸಾಕಿ ಸಲಹುವಲ್ಲಿ ಆಕೆ ಪಟ್ಟ ಶ್ರಮವನ್ನೊಮ್ಮೆ ನೆನಪಿಸಿ.. ಬಾಲ್ಯದಲ್ಲಿ ನೀವು ಎಲ್ಲೆಂದರಲ್ಲಿ ಅಲೆದಾಡುವಾಗ ತನ್ನ ಕಣ್ಣಲ್ಲಿ ಕಣ್ಣಿಟ್ಟು ನಿಮ್ಮನ್ನು ಸಾಕಿದ್ದನ್ನೊಮ್ಮೆ ನೆನಪಿಸಿಕೊಳ್ಳಿ. ನಿಮ್ಮ ಜನ್ಮದ ಸಂದರ್ಭದಲ್ಲಿ ತಾಯಿ ಪಟ್ಟ ನೋವನ್ನೊಮ್ಮೆ ನೆನಪಿಸಿಕೊಳ್ಳಿ.. ಇಂತಹಾ ಪ್ರೀತಿಯನ್ನು ನೀಡಿದ ತಾಯಿಯನ್ನು ನೀವು ದೂಷಿಸುವುದಾದರೆ ದೂಷಿಸಿ.. ಹೇಳುವ ಮಾತು ಹೇಳಿಯಾಯಿತು ಇನ್ನು ತರ್ಕ ನಿಮಗೆ ಬಿಟ್ಟದ್ದು..
ಜೈ ಮಾತಾ..
ಕೊನೆಯದಾಗಿ ಮಾತಾ ಶ್ರೀ ಶಾರದಾದೇವಿ ಹಾಗೂ ಶ್ರೀ ರಾಮಕೃಷ್ಣ ಪರಮಹಂಸರನ್ನು ನೆನೆಯುತ್ತಾ ಮಾತಿಗೆ ವಿರಾಮ ಇಡಲಿಚ್ಛಿಸುತ್ತೇನೆ
ಮಾತಾ ಮೇ ಶಾರಾದಾದೇವಿ ರಾಮಕೃಷ್ಣಪ್ರಭುಃ ಪಿತಾ
ಬಾಂಧವಾಃ ಸಕಲಾ ಭಕ್ತಾಃ ಸ್ವದೇಶೋ ಭುವನತ್ರಯಂ
ಜಗತ್ತಿಗೆ ಮಾತೆ ಶ್ರೀ ಶಾರದಾದೇವಿಯೆನಿಸಿದ್ದರೆ , ಪಿತಾಸ್ವರೂಪಿ ಶ್ರೀ ರಾಮಕೃಷ್ಣರು, ಭಕ್ತಜನರೆಲ್ಲರೂ ಮಕ್ಕಳಂತೆಂದಾದಾಗ , ತ್ರಿಲೋಕವೂ ಸ್ವದೇಶವೇ ಆಗಿದೆ..
ಶ್ರೀ ಕೃಷ್ಣಾರ್ಪಣಮಸ್ತು..
ಪ್ರೀತಿ.. ಪ್ರೇಮ... ಮನೊಕಾಮನೆ..... ಒಂದು ಜೋಡಿಯ ಸುತ್ತ...!
ಅನೇಕ ವರ್ಷಗಳ ಕಾಲ ಬರವಣಿಗೆಯಿಂದ ವಿಮುಖನಾಗಿದ್ದೆ ಆದ್ರೆ ಈಗ ಅದ್ಯಾಕೋ ಬರೆಯಬೇಕು ಅನ್ನಿಸಿತ್ತು ಅದೊಂದು ಕಥೆ... ನನ್ನ ಕಥೆಯಲ್ಲ.. ನಾ ಕೇಳಿದ ಪ್ರೀತಿಯ ಕಥೆ... ...
-
ಮನ್ಸಿಂದ ಯಾರೂನೂ ಕೆಟ್ಟೋರಲ್ಲ… ಆದ್ರೆ ಕೆಲವೊಂದು ಸರಿ ಅತ್ಯಂತ ಆಪ್ತರು ಮಾಡುವಂತಹಾ ಕೆಲಸಗಳು ಕುಡಾ ನಮಗೆ ನೋವನ್ನು ತಂದೊಡ್ಡಬಹುದಲ್ವಾ? ಒಂದು ಮಾತು ನಾವ್ಯಾವತ್ತೂ ಹೇ...
-
ಯೂಟ್ಯೂಬ್ನಲ್ಲಿ ಗೀತೆಗಳನ್ನು ಕೇಳುತ್ತಲಿದ್ದ ನನಗೆ ಜನನಿ ಜನನಿ ಜನನಿ...... ಈ ಹಾಡಿನ ಸಾಲುಗಳನ್ನು ಕೇಳುತ್ತಲೇ ನನ್ನ ಮನಃಪಲ್ಲಟದಲ್ಲಿ ನನ್ನ ಬಾಲ್ಯದ ಜೀವನವನ್ನು ನೆ...






