ಮನ್ಸಿಂದ ಯಾರೂನೂ ಕೆಟ್ಟೋರಲ್ಲ… ಆದ್ರೆ ಕೆಲವೊಂದು ಸರಿ ಅತ್ಯಂತ ಆಪ್ತರು
ಮಾಡುವಂತಹಾ ಕೆಲಸಗಳು ಕುಡಾ ನಮಗೆ ನೋವನ್ನು ತಂದೊಡ್ಡಬಹುದಲ್ವಾ? ಒಂದು ಮಾತು ನಾವ್ಯಾವತ್ತೂ ಹೇಳೋದಿದೆ…
Expectation Hurts ! ಆದ್ರೆ ಕೆಲವು ಸಾರಿ ನಾವು
ಯೋಚಿಸಿಯೂ ಇರದ ವಿಷಯಗಳು ಮನಸ್ಸಿಗೆ ತುಂಬಾ ನೋವನ್ನೂ ನೀಡಿದ್ದಿದೆ. ನೀವು ಕಷ್ಟಪಟ್ಟು ಮಾಡಿದ
ವಿಚಾರಗಳಿಗೆ ಬೆಲೆ ಸಿಗದಿದ್ದಾಗ.. ಆಗುವ ನೋವಿದ್ಯಲ್ಲಾ… ಅದು ವರ್ಣಿಸಲಸಾಧ್ಯವೇನೋ.. ಒಬ್ಬ ಪ್ರಿಯಕರನಿಗೆ ತನ್ನ ಪ್ರೇಯಸಿಯ ಮೇಲೆ ಎಷ್ಟೊಂದು ಪ್ರೀತಿಯಿರುತ್ತದೆ
ಹಾಗೆಯೇ ಆಕೆಯಿಂದ ಆತನೂ ಬಯಸುವುದು ಒಂದೆರಡು ಖುಷಿಯ ಸಾಲುಗಳಷ್ಟೇ… ಪ್ರೇಯಸಿ ಹೇಳಿದ ಕೆಲಸ ಮಾಡಲು
ತನ್ನೆಲ್ಲಾ ಕೆಲಸಗಳನ್ನು ಬದಿಗಿಟ್ಟು 3 ದಿನಗಳ ಕಾಲ ಕಷ್ಟದಿಂದ ಮಾಡಿದ ಕೆಲಸಕ್ಕೆ ಫ್ರತಿಫಲ ಸಿಗದಿದ್ದರೆ?
ಹೇಗಾಗಬೇಡ ? ಇದಕ್ಕಂತಲೂ ನೋವಿನ ಸಂಗತಿ ಕೆಲವೊಂದಿದಎ.. ಅದೇನು ಗೊತ್ತಾ… ಪ್ರೇಯಸಿಗೆ ತನ್ನ ಗೆಳತಿಯ
ನೋವು ಅರ್ಥವಾದಂತೆ ತನ್ನಿನಿಯನ ನೋವು ಅರ್ಥವಾಗದಿದ್ದಾಗ ಆಗುವ ತೊಳಲಾಟದ ಮನಸ್ಥಿತಿಯನ್ನು ವರ್ಣಿಸುವವರಾರು?? ಕೆಲವೊಂದು ಬಾರಿ ಪ್ರತಿಯೊಂದು ಮೌನದಲ್ಲೂ ಒಂದು ನೋವಿರುತ್ತದೆ..
ಆ ನೊವಿನಲ್ಲೂ ನಸುಗೋಪವಿದೆ.. ಆ ಕೋಪಕ್ಕೆ ಕಾರಣ ಮಾತ್ರ ನಿಗೂಢ ರಹಸ್ಯದಂತೆ ಭಾಸವಾಗುತ್ತದೆ. ಆ ನಿಗೂಢ
ರಹಸ್ಯವನ್ನು ಬೇಧಿಸಲೇ ಬೇಕಿದೆ.. ಮೌನ ಮುರಿಯಲೇ ಅಥವಾ ಇನ್ನೂ ಮೌನಿಯಾಗಲೇ??? ..
ಮೌನವೇ ಹಿತ.. ಮಾತು ಮನೆ ಕೆಡಿಸಬಾರದಲ್ಲ…
ಕೊನೇ ಮಾತು…
ಮನ್ಸಿಂದ ಯಾರೂನೂ ಕೆಟ್ಟೋರಲ್ಲ…
ಒಂದ್ ಮಾತು ಬತ್ತದೆ ಒಂದ್ ಮಾತು ಹೊಯ್ತದೆ..
ನುಂಗ್ಕೊಂಡು ನಡೆಯೋನು ಮನುಜ ತಾನೆ..
ಇದ್ದಿದ್ದು ಇರ್ತದೆ ಹೋಗಿದ್ದು ಹೊಯ್ತದೆ
ಮನುಷ್ಯತ್ವ ಮರೆತೋದ್ರೆ ತಪ್ಪು ಸಾನೆ
ಅನುಸರ್ಸ್ಕೊಂಡ್ ಹೋದ್ರೆ ಎಲ್ಲಾ ಮಕ್ಳಾಟಾನೇ !
ಮನ್ಸಿಂದ ಯಾರೂನೂ ಕೆಟ್ಟೋರಲ್ಲ…
ಮನ್ಸಿಂದ ಯಾರೂನೂ ಕೆಟ್ಟೋರಲ್ಲ
ಕಷ್ಟ ಸುಖ ಎರಡೂ ಮನುಷ್ಯಂಗ್ ಬರದೇ ಏನು
ಇಷ್ಟುದ್ದ ಇರೋ ಮರಕ್ ಬತ್ತದಾ?
ನೋವು ನಲಿವು ಪಟ್ಟು ಮಯ್ಯ ಮರೆತು ನಿಂತ್ರೆ
ಕಾಲ ಒಂದು ಹೆಜ್ಜೆನ ತಪ್ತದಾ?
ಕೇಳಾರ ಕೇಳಿ, ಬಿಟ್ಟಾರ ಬಿಡಿ
ಬದುಕೊಂದು ಬಳಪ ಪ್ರೀತಿನೇ ತಿದ್ದಿ
ಗಳಿಸ್ಕೊಂಡು ಹೋಗೋದು ಸಂಬಂಧನೇ…
ಗಳಿಸ್ಕೊಂಡು ಹೋಗೋಕಾಗೋದು ಸಂಬಂಧನೇ
ಅನುಸರಿಸ್ಕೊಂಡು ಹೋಗು ಎಲ್ಲ ಕ್ಷಣಗಳನ್ನೇ….

No comments:
Post a Comment