ಇದೊಂದು ಪಕ್ಕಾ ಹಳ್ಳಿ ಹುಡುಗನ ಕಥೆ, ಒಬ್ಬ ಹಳ್ಳಿ ಹುಡುಗ, ಅಂದ್ರೆ ಕೂಪ ಮಂಡೂಕ ಸಿಟಿ ಎಂಬ ಸಮುದ್ರದೊಳಗೆ ಧೂಮುಕಿ ಮುಂದೇನಾಗುತ್ತೆ ಎನ್ನೊ ಒಂದು ಹಾಸ್ಯಮಯ ಕಥೆ…
ಆ ಹುಡುಗನ ಹೆಸರು ಬೇಡ ಬಿಡಿ.. ಯಾಕ್ ಸುಮ್ನೆ .. ಆದ್ರೆ ಪಕ್ಕಾ ಹಳ್ಳಿ ಹುಡುಗ ತನ್ನ ಪ್ರಾರ್ಥಮಿಕ ವಿದ್ಯಾಭ್ಯಾಸವನ್ನೆಲ್ಲಾ ಒಂದು ಪ್ರತಿಷ್ಟಿತ ಶಾಲೆಯಲ್ಲಿ ಮುಗಿಸಿದ್ದರೂ ಆತನಿಗೆ ಗುಣಾಕಾರ ಭಾಗಾಕಾರ ಲೆಕ್ಕ ಕಬ್ಬಿಣದ ಕಡಲೇಕಾಯಿಯೇ ಸರಿ.. ಅಷ್ಟೇ ಯಾಕೆ ಸಮಾಜ ಮತ್ತುಯ ಕನ್ನಡ ವಿಷಯ ಬಿಟ್ರೆ ಬೇರಾವ ವಿಷಯಗಳು ಅವನ ತಲೆಗೆ ಹತ್ತುತ್ತಿರಲಿಲ್ಲವಂತೆ…ಈ ಹಳ್ಳಿ ಗಮಾರನನ್ನು ಹೇಗಾದರೂ ಮಾಡಿ ಉದ್ಧಾರ ಮಾಡಿಯೇ ತೀರುವೆ ಎಂದು ಪಣತೊಟ್ಟ ಆತನ ಅತ್ತೆ ಆತನನ್ನು ಆ ಹಳ್ಳಿಯಿಂದ ಬಿಡಿಸಿ ಸುಮಾರು 75 ಕಿ.ಮಿ ದೂರದ ಮಂಗಳೂರಿಗೆ ಕರೆದುಕೊಂಡು ಬಂದರು, ಆದ್ರೆ ಈ ಪುಣ್ಯಾತ್ಮ ಅಟ್ಲೀಸ್ಟ್ ಅತ್ತೆಯ ಮರ್ಯಾದೆ ಉಳಿಸೋಕಾದ್ರೂ ಚೆನ್ನಾಗಿ ಕಲಿಬೇಕಲ್ವಾ??? ಊಹುಂ ಕಲೀಲೇ ಇಲ್ಲ.. ಆದ್ರೆ ಆ ಅತ್ತೆಗೆ ಒಬ್ಬ ಮಗನಿದ್ದ ಆ ಪುಣ್ಯಾತ ಆ ಸಮಯದಲ್ಲಿ ರಾಕ್ಷಸನಂತೆ ಕಂಡರೂ ಬಳಿಕ ಆತ ದೇವಮಾನವನಾದ..
ಅದೆಲ್ಲಾ ಇರ್ಲಿ ಈಗ ಜೀನ್ಸ್ ಪ್ಯಾಂಟಿನ ಕಥೆ ಹೇಳೊಕೆ ಹೊರಟ ಈ ಪುಣ್ಯಾತ್ಮ ಕಥೆನ ಬೇರೆ ಕಡೆ ಡೈವರ್ಟ್ ಮಾಡ್ತಾ ಇದಾನೆ ಅಂತ ಮನಸ್ಸಲ್ಲೇ ಬೈಕೋಬೇಡಿ, ವಿಷ್ಯ ಇರೋದೇ ಈ ಪೀಠಿಕೆಯಲ್ಲಿಉ ರೀ.. ಆತ ಹೊಸ ಶಾಲೆಎ ಏನೋ ಸೇರ್ಕೊಂಡಿದ್ದಾಯ್ತು, ಸದ್ಯಕ್ಕೆ ಆತನ ಉನಿಫಾರ್ಮ್ ಹೊಲಿಸ್ಕೊಂಡು ಕೋಲೆ ಬಸವನ ಥರ ಶಾಲೆಗೆ ಹೊಗ್ಬರ್ತಿದ್ದ.. ಹೋದ ಪುಟ್ಟ ಬಂದ ಪುಟ್ಟ ಎಂಬ ಗಾದೆಯ ಥರಹ ಶಾಲೆಗೆ ಹೋಗೊದು ಟೀಚರ್ ಹೇಳೋ ಪಾಠ ಕೇಳೋದು ವಾಪಾಸ್ ಮನೆಗೆ ಬರೋದು ಅಷ್ಟೇ ಅವನ ದಿನಚರಿ, ಹೀಗೆ ದಿನ ಸಾಗಿರಲು ಒಂದು ದಿನ ಅವನ ಸ್ಕೂಲ್ನಲ್ಲಿ ಮೊದಲ ಫಂಕ್ಷನ್ ಹೆಡ್ಮಿಸ್ಟ್ರೆಸ್ಸು ಬಂದು ನಾಳೆ ಎಲ್ರೂ ಕಲರ್ ಡ್ರೆಸ್ ಹಾಕೊಂಡು ಬರ್ಬೋದು ಅಂತ ಅನೌಂನ್ಸ್ ಮಾಡೇ ಬಿಟ್ರು.. ಅಯ್ಯಾ ನಮ್ ಹೀರೋಗೂ ಅಷ್ಟೇ ಬೇಕಿತ್ತೇನೋ, ಪುಣ್ಯಾತ್ಮ ತನ್ನ ಫ್ರೆಂಡ್ಸ್ ಹತ್ರ ಬಡಾಯ ಕೊಚ್ಚಕೊಳೋಕೆ ಶುರು ಮಾಡ್ಕೊಂಡು ಬಿಟ್ಟಿದ್ದ, ನಾಳೆ ನಾನು ಸ್ಟೈಲ್ ಜೀನ್ಸ್ ಪ್ಯಾಂಟ್ ಹಾಕೋಂಡು ಬರ್ತೀನಿ ನೋಡ್ತಿರಿ ಅಂತ… ಅಯ್ಯೋ ದೇವಾ ಈ ಮಾತು ಹೇಳೋಕು ಮೊದ್ಲು ಅವನಿಗೆ ಜೀನ್ಸ್ ಪ್ಯಾಂಟ್ ಎಲ್ಲಿ ಸಿಕ್ತು ಅಂತ ಹೇಳೇ ಇಲ್ವಲ್ಲ.. ವಿಷ್ಯ ಇಷ್ಟೇ ಕಣ್ರೀ ಅವನ ಅಣ್ಣ ಇದ್ದ ಅಂದಿದ್ನಲ್ಲ ಅದೇ ಆ ಹಳೇ ರಾಕ್ಷನ ಅವನ ಸೊಂಟಕ್ಕೆ ಚಿಕ್ಕದಾಗುವ ಪ್ಯಾಂಟೊಂದನ್ನು ಇವನಿಗೆ ಹಾಕೋಳೋಕೆ ಕೊಟ್ಟಿದ್ರು, ಆದ್ರೆ ಆ ಪ್ಯಾಂಟಿನ ಝಿಪ್ ಮಾತ್ರ ಹಾಳಾಗ್ ಹೋಗಿತ್ತು. ಅದೇ ಪ್ಯಾಂಟ್ನ ಧೈರ್ಯದಲ್ಲಿ ಇವನು ಫ್ರೆಂಡ್ಸ್ ಮುಂದೆ ಬಡಾಯಿ ಕೊಚ್ಚಿಕೊಂಡು ಬಿಟ್ಟಿದ್ದ ಅಷ್ಟೇ.. ಆಲ್ ರೈಟ್ ಈಗ ಮುಂದಕ್ ಹೋಗಣ…
ಅಂತೂ ಇಂತೂ ಫಂಕ್ಷನ್ ದಿನ ಬಂದೇ ಬಿಡ್ತು, ಇವನೂ ಕೂಡಾ ಅದೇ ಝಿಪ್ ಇಲ್ದಿರೋ ಪ್ಯಾಂಟ್ ಹಾಕೊಂಡು ಶಾಲೆಗೆ ನಾನೇ ಹೀರೋ ಅನ್ನೋ ರೇಂಜಿಗೆ ಎಂಟ್ರಿ ಕೊಟ್ಟಿದ್ದ, ಅಯ್ಯೋ ಶಿವನೇ ಈ ಹುಡುಗನ ಗ್ರಹಚಾರ ಕೆಟ್ಟೋಗಿತ್ತೋ ಏನೋ.. ಅವನ ಫ್ರೆಂಡ್ಸ್ ಬಂದು ಅವನ ಪ್ಯಾಂಟ್ ಝಿಪ್ ನೋಡಿ ಘೋಳ್ಳಂತ ನಕ್ಕು ಬಿಡೋದಾ???? ಛೇಛೇಛೇ … ಅಲ್ಲ ಮಾರಾಯಾ ಈ ಹರ್ದೋಗಿರೋ ಝಿಪ್ ಇಲ್ದೇ ಇರೋ ಜೀನ್ಸ್ ಪ್ಯಾಂಟ್ ನಂಬಿ ನೀನು ನಮ್ಮ ಮುಂದೆ ಬಿಲ್ಡಪ್ ಕೊಟ್ಯಾ ಅಂತ ಕೇಳಿದ್ದ.. ಅಷ್ಟೇ ಅಲ್ಲ ಅಕ್ಕ ಪಕ್ಕದಲ್ಲಿರೋ ಹುಡ್ಗೀರಿಗೂ ಅವನ ಈ ಜೀನ್ಸ್ ಪುರಾಣವನ್ನು ಬಿಚ್ಚಿಟ್ಟಿದ್ದ. ಶಿವನೇ ಶಂಭುಲಿಂಗ ಎಂದು ಪಾಪ ಆ ಹುಡುಗ ಇಡೀ ದಿನ ಮನಸಾರೆ ಅತ್ತು ಬಿಟ್ಟಿದ್ದ, ಇನ್ನು ಮುಂದೆ ಪ್ಯಾಂಟ್ ಹಾಕಿಲ್ಲ ಅಂದ್ರೂ ಪರ್ವಾಗಿಲ್ಲ, ಬಟ್ ಝಿಪ್ ಇಲ್ದೇ ಇರೋ ಪ್ಯಾಂಟ್ ಅಂತೂ ಹಾಕಲ್ಲ ಅಂತ ಪ್ರಮಾಣ ಮಾಡ್ಕೊಂಡ್ ಬಿಟ್ಟ ಪಾಪ,,,
ಹಾಸ್ಯ ಏನೇ ಇರ್ಲಿ ರೀ. ಆದ್ರೆ ಈ ಕಥೆಯ ಹಿಂದೆ ಎರಡು ನೀತಿ ಅಡಗಿದೆ ಕಣ್ರೀ..
ಒಂದು : ವಿಷಯದ ಬಗ್ಗೆ ಅರಿವಿಲ್ಲದೇ ನಾವು ಯಾವತ್ತೂ ಬಡೆಆಯಿ ಕೊಚ್ಕೋಬಾರ್ದು
ಎರಡು : ಏನೇ ಇರ್ಲಿ ಬಡಪಾಯಿ ಜೀವಿಗಳ ಬಗ್ಗೆ ನಾವು ಯಾವತ್ತೂ ಹಾಸ್ಯ ಮಾಡ್ಬಾರ್ದು…
ಅಂದ ಹಾಗೆ ಈ ಕಥೆ ಯ ಕಥಾನಾಯಕ ಯಾರು ಅಂತೀರಾ????????
ಹಿ ಇಸ್ ನನ್ ಅಥರ್ ಥೆನ್ …. ಅಕ್ಷಯ್ ಹೂ ಇಸ್ ಎ ಜರ್ನಲಿಸ್ಟ್ ನೌ
No comments:
Post a Comment