Monday, 4 February 2019

ಶಿಸ್ತಿನ ಸಿಪಾಯಿಗೆ ಅಕ್ಷರದ ನಮನ

ಹೌದು ಇನ್ನು ಆ ಕುರ್ಚಿಯೂ ಬೇಸರಿಸಬಹುದೇನೋ... ಕಾನ್ಫರೆನ್ಸ್ ರೂಂನಲ್ಲಿರುವ ಬಿಳಿ ಬಣ್ಣದ ಬೋರ್ಡ್ ಕೂಡಾ ನನ್ನ ಮೇಲೆ ಗೀಚುವವರಿಲ್ಲ ಎಂದು ಕನವರಿಸಬಹುದೇನೋ...
ಹೌದು ನಾ ಹೇಳ ಹೊರಟಿರುವುದು ಒಂದು ಅನರ್ಘ ರತ್ನದ ಬಗ್ಗೆ. ಹಲವಾರು ವರುಷಗಳ ಕಾಲ ಕಾಮಧೇನುವಿಗೆ ಪರಿಚಿತನಾದ ಒಬ್ಬ ಶಿಸ್ತಿನ ಸಿಪಾಯಿ ಇಂದು ಕಾಮಧೇನು ಸಂಸಾರವನ್ನು ತೊರೆದು ತನ್ನ ಕಾರ್ಯನಿಮಿತ್ತ ಇನ್ನೊಂದೆಡೆ ತೆರಳಲನುವಾದಂತೆ ನಮ್ಮ ಮನದಲ್ಲೇನೋ ತಳಮಳ.. ನನ್ನ ಆಯುಷ್ ಟಿವಿಯ ಸಂಸಾರದೊಂದಿಗೆ ಸೇರಿಸಿದ ಗುರು ಒಬ್ಬರಾದರೆ , ಮಾಧ್ಯಮದ ವಿಚಾರವನ್ನು ನನಗೆ ಅರ್ಥ ಮಾಡಿಸಿದ ಗುರು ಮತ್ತೋರ್ವರು.. ಅವರೇ ನಮ್ಮ ನೆಚ್ಚಿನ ಶಿವಕುಮಾರ್ ಸರ್

ಏರು ಧ್ವನಿ, ಶಾಂತ ವ್ಯಕ್ತಿತ್ವ ಇದು ಸಾಧಾರಣವಾಗಿ ಸಿಗುವುದು ವಿರಳವೇ ಸರಿ.. ಆದರೆ ಅದನ್ನೆಲ್ಲವನ್ನೂ ಮೈಗೂಡಿಸಿಕೊಂಡಂತಹಾ ಸರಳತೆಯ ಸಾಕಾರಮೂರ್ತಿ ಶಿವಕುಮಾರ್ ಸರ್.
ಒಂದು ಕಾರ್ಯಕ್ರಮ ಯಶಸ್ವಿಯಾಗಿ ಸಾಂಗವಾಗಿ ಸಾಗಬೇಕೆಂದರೆ ಅದರಲ್ಲಿ ಸ್ಕ್ರಿಪ್ಟ್ ಬಹಳ ಮಹತ್ತರವಾದಂತಹಾ ಪಾತ್ರ ವಹಿಸುತ್ತದೆ ಎನ್ನುವುದು ಸುಳ್ಳಲ್ಲ. ಆದರೆ ಅದರ ಮೌಲ್ಯವನ್ನೇ ಅರಿಯದ ಜನರ ಮಧ್ಯೆ ಇದ್ದುಕೊಂಡೆ ಸೌಮ್ಯವಾಗಿಯೇ ಅವರೊಂದಿಗೆ ಹೋರಾಡಿ, ಸ್ಕ್ರಿಪ್ಟ್ ನ ಮೌಲ್ಯವನ್ನು ತಿಳಿಸಿದವರು ಶಿವಕುಮಾರ್ ಸರ್. ಬಕೇಟ್‍ಗಳ ನಡುವಲ್ಲಿಯೇ ಇದ್ದರೂ ಎಂದಿಗೂ ಬಕೇಟ್ ಹಿಡಿದವರನ್ನು ಪೋಷಿಸಿದವರಲ್ಲ, ನೈಜ ಪ್ರತಿಭೆಗೆ ಬೆಲೆ ನೀಡುತ್ತಾ ಪ್ರತಿಭೆಗಳ ತಲಾಷೆಯನ್ನೂ ನಡೆಸಿ , ಸೂಕ್ಷ್ಮವಾಗಿ ಕುಳಿತಲ್ಲಿಯೇ ಪ್ರತಿಯೊಬ್ಬರ ವ್ಯಕ್ತಿತ್ವವನವನು ಅಳೆಯುತ್ತಿದ್ದ ಪುಣ್ಯಾತ್ಮನಾತ. ಯಾರೇ ಇರಲಿ ತನ್ನ ನಿರ್ಧಾರವನ್ನು ಧೈರ್ಯದಿಂದ ತಿಳಿಸಿ ಬಿಡುತ್ತಿದ್ದವರು. ತಮಗಿತ್ತ ಕೊನೇಯ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿ ತಾನಾಯಿತು ತನ್ನ ಪಾಡಾಯಿತು ಎಂಬಂತೆ ಎಲ್ಲವನ್ನೂ ಮುಗಿಸಿ
ಶಿಸ್ತಿನಿಂದ ಆಯುಷ್ ವಾಹಿನಿಯಿಂದ ನಿರ್ಗಮಿಸಿದರು. ಅವರು ನಿರ್ಗಮಿಸುವ ಸಂದರ್ಭದಲ್ಲಿ ಯಾರ ಕಣ್ಣಂಚು ತೇವವಾಗದಿದ್ದರೂ ಮನದಾಳದಲ್ಲಿ ಅವರನ್ನು ಆ ಕುರ್ಚಿಯಲ್ಲಿ ಇನ್ನು ನೋಡಲಾಗುವುದಿಲ್ಲವಲ್ಲ ಎಂಬ ಅಸಹಾಯಕ ಭಾವನೆ ಮೂಡಿದ್ದಂತೂ ಸುಳ್ಳಲ್ಲ.. ಅವರಿದ್ದಷ್ಟು ಕಾಲ ಒಬ್ಬ ಬರಹಗಾರನಾದ ನನಗೆ ಮರ್ಯಾದೆಯಿತ್ತು, ಇನ್ನು ಮುಂದೆ ಅದು ಇರುವುದೆಂಬ ನಂಬಿಕೆಯಿಲ್ಲ.. ಆದರೂ ಅವರ ಮಾರ್ಗದರ್ಶನ ನಮ್ಮೊಂದಿಗಿದೆ ಎಂಬ ಭಾವನೆಯಲ್ಲಿ.. ಎಲ್ಲೇ ಇರಲಿ ಹೇಗೇ ಇರಲಿ ಚೆನ್ನಾಗಿರಲಿ.

ಇಂತಿ ಪ್ರೀತಿಯಿಂದ
ಅಕ್ಷಯ್ ಜಿ ಭಟ್


1 comment:

ಪ್ರೀತಿ.. ಪ್ರೇಮ... ಮನೊಕಾಮನೆ..... ಒಂದು ಜೋಡಿಯ ಸುತ್ತ...!

ಅನೇಕ ವರ್ಷಗಳ ಕಾಲ ಬರವಣಿಗೆಯಿಂದ ವಿಮುಖನಾಗಿದ್ದೆ ಆದ್ರೆ ಈಗ ಅದ್ಯಾಕೋ ಬರೆಯಬೇಕು ಅನ್ನಿಸಿತ್ತು ಅದೊಂದು ಕಥೆ... ನನ್ನ ಕಥೆಯಲ್ಲ.. ನಾ ಕೇಳಿದ ಪ್ರೀತಿಯ ಕಥೆ... ...