ಅನೇಕ ವರ್ಷಗಳ ಕಾಲ ಬರವಣಿಗೆಯಿಂದ ವಿಮುಖನಾಗಿದ್ದೆ ಆದ್ರೆ ಈಗ ಅದ್ಯಾಕೋ ಬರೆಯಬೇಕು ಅನ್ನಿಸಿತ್ತು ಅದೊಂದು ಕಥೆ... ನನ್ನ ಕಥೆಯಲ್ಲ.. ನಾ ಕೇಳಿದ ಪ್ರೀತಿಯ ಕಥೆ...
ಹುಚ್ಚುಕೋಡಿ ಮನಸ್ಸು ಅದು ಹದಿಹರೆಯದ ವಯಸ್ಸು ಎನ್ನುವ ಮಾತಿದೆ... ಆದರೆ ಈ ಕಥೆಯಲ್ಲಿ ಇದು ಹದಿಹರೆಯದ ವಯಸ್ಸಿನ ಕಥೆಯಲ್ಲ.. ಬದಲಾಗಿ ಹರೆಯದ ವಯಸ್ಸು ಮುಗಿದ ಬಳಿಯ ಮದುವೆಯಾದ ಒಂದು ಜೋಡಿಯ ಕಥೆ,... ಪ್ರೀತಿಸಿ ಮದುವೆಯಾದ ಜೋಡಿಯೊಂದು ಇಂದು ದೂರಾದ ಕಥೆ.. ಹೆಚ್ಚೇನು ಬರೆಯಲಾರೆ ಆದ್ರೆ ಬರೆಯುವ ನಾಲ್ಕಕ್ಷರ ಇನ್ನೊಬ್ಬರ ಜೀವನಕ್ಕೆ ಪಾಠವಾದೀತು...
ಕಥೆ ಪ್ರಾರಂಭವಾಗುವುದು ಅದೊಂದು ಕಾಲೇಜು ಯುವಜೋಡಿಯ ಪ್ರೀತಿಯಿಂದ.. ಅದಾಗಲೇ ಒಂದು ಪ್ರೇಮ ವೈಫಲ್ಯದಿಂದ ನೊಂದಿದ್ದ ಹುಡುಗನ ಬಾಳಿನಲ್ಲಿ ಮಹಾಲಕ್ಷ್ಮಿಯಂತೆ ಒಬ್ಬಳು ಬಂದು ನೋವಿನಲ್ಲಿದ್ದ ಕಥಾನಾಯಕನಿಗೆ ಹೆಗಲು ನೀಡಿ ನಿನ್ನ ನೋವಲ್ಲಿ ನಾನಿದ್ದೇನೆ ನಿನ್ನ ಜೊತೆಯಲ್ಲಿ ನಾನಿದ್ದೇನೆ ಎನ್ನುವ ಧೈರ್ಯವನ್ನೂ ತುಂಬುತ್ತಾಳೆ. ಒಂದೇ ನೋಟದಲ್ಲಿ ಇವನೇ ನನ್ನ ಬಾಳ ಸಂಗಾತಿ ಎಂದು ನಿರ್ಧರಿಸಿದ ನಾಯಕಿ ಮೌನದಲ್ಲೇ ಆತನನ್ನು ಪ್ರೀತಿಸಿ ಮದುವೆಯ ನಿರ್ಧಾರವನ್ನೂ ಮಾಡ್ತಾಳೆ.... ಕಟ್.....!!!!! ಅಲ್ಲಿಗೆ ಮೊದಲ ಸೀನ್ ಮುಗೀತು... ಯಾಕೆ ಹೇಳಿ....???? ಕಾಲೇಜು ಕೂಡಾ ಮುಗೀತಲ್ವಾ ಅದಕ್ಕೆ....
ಪದವಿ ಶಿಕ್ಷಣವೇನೋ ಮುಗೀತು ಆದ್ರೆ ಪ್ರೀತಿ ಪ್ರಯಾಣ ಸುಖಮಯವಾಗಿತ್ತು... ಎಲ್ಲಿಯವರೆಗೆ ಅಂದರೆ ಮನೆಯವರ ವಿರೋಧದ ವರೆಗೆ... ಇಬ್ಬರ ಮದುವೆಗೆ ಅದ್ಯಾಕೋ ಗೊತ್ತಿಲ್ಲ ನಾಯಕಿಯ ಮನೆಯಲ್ಲಿ ವಿರೋಧ ವ್ಯಕ್ತಪಡಿಸಿದ್ರು,... ಆದರೆ ನಾಯಕಿ ಗಟ್ಟಿಗಿತ್ತಿ.. ಇಪ್ಪತ್ತು ವರ್ಷಗಳಿಗೂ ಹೆಚ್ಚು ಕಾಲ ತನ್ನನ್ನು ಸಾಕಿ ಸಲಹಿದ ಮನೆಯ ಹೊಸ್ತಿಲು ದಾಟಿ ನಾಯಕನ ಜೀವನ ಬೆಳಗುವ ನಿಶ್ಚಯ ಮಾಡ್ತಾಳೆ.. ಮನೆ ಬಿಟ್ಟು ಒಂಟಿಯಾಗಿ ಜೀವನ ನಡೆಸ್ತಿರ್ತಾಳೆ.. ಈ ಮಧ್ಯೆ ಇವರಿಬ್ಬರನ್ನೂ ಒಂದು ಮಾಡಬೇಕಲ್ಲ...? ಒಂದಷ್ಟು ಗೆಳೆಯರು, ವಕೀಲರು, ಪೊಲೀಸರು, ರಿಜಿಸ್ಟ್ರಾರ್ ಕಚೇರಿ ಅಂತ ತಿರುಗಾಡಿ ಅದೇನೋ ಮಾಡಿ ನಾಯಕನ ಜೊತೆ ಬೆನ್ನೆಲುಬಾಗಿ ನಿಂತು ನಿಶ್ಚಿತಾರ್ಥ .. ಮದ್ವೆನೂ ಮಾಡಿಸ್ತಾರೆ..... Wait̤̤̤ ಗಮನಿಸಿ.. ನಿಶ್ಚಿತಾರ್ಥಕ್ಕೂ ಮದ್ವೆಗೂ ಬರೊಬ್ಬರಿ ಒಂದು ವರ್ಷದ ಅಂತರವಿತ್ತೇನೋ...!!
ಅದೇನೇ ಇರಲಿ ಕಥಾನಾಯಕ ಮದ್ವೆನೂ ಆದ..!! ಅಲ್ಲಿಯವರೆಗೆ ಸರಿಯಾಗಿದ್ದ ಪುಣ್ಯಾತ್ಮನಿಗೆ ಅದೇನಾಯ್ತೋ... ಇದ್ದಕ್ಕಿದ್ದಂತೆ ಬದಲಾಗಿಬಿಡೋದಾ...? ಬದಲಾವಣೆ ಒಳ್ಳೆಯದಾದ್ರೆ ಎಲ್ಲರಿಗೂ ಸಂತೋಷ.. ಆದ್ರೆ ಆ ಬದಲಾವಣೆ ವ್ಯತಿರಿಕ್ತವಾದ್ರೆ...? ಸಾಕು.. ಸೀನ್ ಟೂ ಇಲ್ಲಿಗೆ ಕಟ್ ಮಾಡೋಣ ಅಲ್ವಾ...?
ಇರ್ಲಿ ಈಗ ಸೀನ್ ಮೂರು.... ಕಥಾನಾಯಕನಿಗೆ ಮದ್ವೆ ಆಗಿದೆ ಅಂತ ಗೆಳೆಯರೆಲ್ಲ ನೆಮ್ಮದಿಯ ನಿಟ್ಟುಸಿರು ಬಿಟ್ರೆ.. ಕಥಾನಾಯಕ ಮಾತ್ರ ಅಯ್ಯೋ ಮದ್ವೆ ಆಯ್ತಲ್ಲ ಅಂತಿದ್ದ... ಯಾಕೆ ಗೊತ್ತಾ..? ತನ್ನ ದುಬಾರಿ ವಾಹನದಲ್ಲಿ ಇಷ್ಟು ದಿನ ಹಲವರಾರು ಚೆಲುವೆಯರನ್ನು ಕೂರಿಸಿಕೊಂಡು ಹೋಗ್ಬೋದಿತ್ತು ಆದ್ರೆ ಇನ್ಮುಂದೆ ಆಗಲ್ವೇ ಅನ್ನೋ ಬೇಸರದಲ್ಲಿದ್ದ...! ಆದ್ರೆ ಅದೇನೋ ಹೇಳ್ತಾರಲ್ಲಾ ಮನಸ್ಸು ಮರ್ಕಟ ಅಂತ ಹಂಗೆ ಆಯ್ತು.. ಮದ್ವೆ ಆದ್ರೂ ತನ್ನ ಚಾಳಿ ಬಿಡ್ತಿಲ್ಲ ನೋಡಿ... ಮನೆಯಲ್ಲಿ ನಿಜವಾಗ್ಲೂ ದೇವತೆಯಂತೆ ಇರುವ ಮುದ್ದು ಮಡದಿಯ ಬಿಟ್ಟು ನಾಯಕನ ಚಿತ್ತ ಇದ್ದಿದ್ದೆಲ್ಲಾ ಅದೆಷ್ಟೋ ತಾಟಕಿ.. ಶೂರ್ಪನಖಿಯರ ಸುತ್ತ...!! ಒಳ್ಳೆಯ ಉದ್ಯೋಗದಲ್ಲಿದ್ದ ನಾಯಕ ಅದೆಷ್ಟು ಅರಸಿಯರ ನಂಬರ್‌ಗಳನ್ನು ತನ್ನ ಮೊಬೈಲ್‌ನಲ್ಲಿ ಪೇರಿಸಿಟ್ಟಿದ್ದನೋ... ಅದೆಷ್ಟು ಜನರ ಜೊತೆ ಸಂದೇಶದಲ್ಲೇ ಸಂಸಾರ ಮಾಡಿದ್ನೋ ಗೊತ್ತಿಲ್ಲ....!! ಈ ಈ ವಿಷ್ಯ ಗೆಳೆಯರಿಗೆ ಗೊತ್ತಿದ್ರೂ ನಾಯಕಿಗೆ ತಿಳಿಸಲು ಆಗ್ತಿಲ್ಲ.. ಯಾಕೆ ಗೊತ್ತಾ ಸಂಸಾರ ಮುರಿದು ಹೋದೀತು ಎಂಬ ಭಯ..!!! ಇಷ್ಟೆಲ್ಲಾ ವಿಚಾರಗಳಿದ್ಯಲ್ಲ ಇದ್ರ ಮಧ್ಯೆ ಆ ಯುವಕ ಹೆಂಡತಿಯನ್ನೇನು ಹಿಂಸೆ ಮಾಡಿರ್ಲಿಲ್ಲ.. ಪ್ರೀತಿ ಸಂತೋಷ ಎಲ್ಲವನ್ನೂ ಕೊಟ್ಟಿದ್ದ... ನಾಯಕನ ಗೆಳೆಯರೆಲ್ಲಾ ಸೇರಿ ನಾಯಕಿಗೆ ಏನೋ ಒಂದು ಒಳ್ಳೆ ಕೆಲ್ಸದ ಏರ್ಪಾಟೂ ಮಾಡಿದ್ರು..... ಸಾಕು... ಸೀನ್ ತ್ರೀ..... ಕಟ್..!!
ನಾಲ್ಕನೇ ಸೀನ್ ಪ್ರಾರಂಭವಾಗೋದೇ ಬುದ್ಧಿವಾದಗಳಿಂದ.. ನಾಯಕನ ಅತಿರೇಕಗಳನ್ನು ತಿಳಿದ ಸ್ನೇಹಿತರು ಆತನಿಗೆ ಬುದ್ಧಿ ಹೇಳುತ್ತಾ ಬಂದ್ರು.. ಮಗಾ ಮದ್ವೆ ಆಗಿದೆ.. ಅಟ್‌ಲೀಸ್ಟ್ ಹೆಂಡ್ತಿ ಜೊತೆ ಮರ್ಯಾದೆಯಿಂದ ಬಾಳು ಅಂತ ಹೇಳಿದ್ರೂ ನಾಯಕ ಬಿಲ್‌ಕುಲ್ ಕೇಳ್ತಿಲ್ಲ... ಆಯ್ತು ಗುರೂ ಅಂತ ಮರುದಿನ ಅದೇ ವರಸೆ.. ಕಾರ್‌ನಲ್ಲಿ ಯುವತಿಯರನ್ನ ಕರ್ಕೋಡು ಮೋಜು ಮಾಡೋದು....! ಎಲ್ಲಿಯವರೆಗೆ ಅಂದ್ರೆ ಹೆಂಡ್ತಿ ತನ್ನ ತವರು ಮನೆಗೆ ಹೋಗಿದ್ರೆ ಬೇರೆ ಯುವತಿಯರನ್ನ ಮನೆಗೆ ಕರೆದುಕೊಂಡು ಬರುವಷ್ಟು...!!!!! ಈ ಮಧ್ಯೆ ನಾಯಕನ ಸ್ನೇಹಿತರು ನಾಯಕನ ಬಳಿ ಮಗಾ ನಿಂಗೆ ಮದ್ವೆ ಆಗಿದ್ಯಲ್ವಾ ಒಂದು ಫೋಟೋ ಆದ್ರೂ ಸಾಮಾಜಿಕ ಜಾಲತಾಣದಲ್ಲಿ ಹಾಕು ಅಂದ್ರೆ ಅವನ ರೆಡಿಮೇಡ್ ಉತ್ತರ ಏನ್ ಗೊತ್ತಾ...? ಮಗಾ ಮದ್ವೆ ಆಗಿದೆ ಅಂತ ಗೊತ್ತಾದ್ರೆ ಮಜಾ ಮಾಡೋಕಾಗಲ್ಲ ಅಂತ...!!! ಏನ್ ಹೇಳೋಣಾ...? ಇದು ಹೇಗಾಯ್ತು ಅಂದ್ರೆ ಅಂಗೈಯಲ್ಲಿ ಮಾಣಿಕ್ಯನ ಹಿಡ್ಕೊಂಡು ಬೆಳ್ಳಿಗಾಗಿ ಊರಿಡೀ ಅಲೆದ ಹಾಗಾಯ್ತು...!!! ಕುಡಿ.. ಮಜಾ ಮಾಡು.. ಹೆಂಡ್ತಿಯಿಂದ ವಿಷ್ಯ ಬಚ್ಚಿಡು... ಅಷ್ಟೇ...! ಓಕೆ.. ಸರಿ ಸೀನ್ ನಾಲ್ಕು ಇಲ್ಲಿಗೆ ಕ್ಲೋಸ್ ಮಾಡೋಣ ಅಲ್ವಾ....!!!!!
ಓಕೆ ಮುಂದೇನಾಯ್ತ..? ನಾಯಕಿಗೆ ನಾಯಕನ ಆಟಾಟೋಪಗಳು ಗೊತ್ತಾಯ್ತಾ...?? ಇಲ್ವಾ ಇದೆಲ್ಲಾ ಓದೋ ಕ್ಯೂರಿಯಾಸಿಟಿ ನಿಮ್ಗೆ ಇದಯಲ್ವಾ...?? ಸರಿ... ಕಟ್ ಟು ಸೀನ್ ಫೈವ್....!!
ಅದೆಷ್ಟು ದಿನ ಆಟಗಳು ಮರೆಯಲ್ಲಿ ನಡೆಯುತ್ತೆ ಹೇಳಿ...?? ಅದ್ಹೇಗೋ ಮದ್ವೆಯಾಗಿ ಒಂದು ಮೂರು ವಷದಲ್ಲೇ ನಾಯಕಿಗೆ ತನ್ನ ಗಂಡನ ಕಥೆಗಳು ಗೊತ್ತಾಗ್ತಾ ಹೋಯ್ತು... ಅದ್ಹೇಗೆ ಅಂತೀರಾ...? ಅದೇನೋ ಮೊಬೈಲ್ ನೋಡೋವಾಗ ವಿಚಾರ ತಿಳಿತಾ ಬಂತಂತೆ... ವಿಚಾರ ಗೊತ್ತಾದ ಮೇಲೂ ನಾಯಕ ಸುಮ್ಮನೆ ತಪ್ಪೊಪ್ಪಿಕೊಳ್ಳಬೇಕು.. ಕ್ಷಮೆ ಕೇಳಿ ಬಿಡ್ಬೇಕು ಅಲ್ವಾ....?? ಹೆಣ್ಣು ಕ್ಷಮಯಾಧರಿತ್ರಿ ಕ್ಚಮಿಸಿ ಸುಮ್ಮನಾಗ್ತಿದ್ಲೋ ಏನೋ.. ಆದ್ರೆ ಹಾಗಾಗಲಿಲ್ಲ... ನಾಯಕ ಹೌದು ನಾನು ಹಾಗೆ ಮಾಡಿದ್ದೇನೆ ಅಂತೆಲ್ಲಾ ಹೆಂಡತಿ ಮೇಲೆ ಎಗರಿ ಹೋದ... ಗಲಾಟೆ ಆಯ್ತು.. ಜಗಳ ಆಯ್ತು.. ಬಾಯಿಮಾತಿಗೆ ನಾಯಕಿ ನಾನು ಮನೆ ಬಿಟ್ ಹೋಗ್ತೀನಿ ಅಂದ್ಲು.. ಇವನಿಗೂ ಅಷ್ಟೇ ಸಾಕಿತ್ತೋ ಏನೋ... ಹೋಗು ಅಂದುಬಿಟ್ಟು... ಅಷ್ಟಕ್ಕೆ ಸುಮ್ಮನಾಗಿದ್ರೆ ಸಾಕಿತ್ತು.. ಪುಣ್ಯಾತ್ಮ ಅದನ್ನೂ ಮಾಡಿಲ್ಲ... ಪ್ರತಿದಿನ ನಾಯಕಿ ಕೆಲ್ಸ ಮುಗ್ಸಿ ಮನೆಗ್ ಬರೋವಾಗ ನೀನಿನ್ನೂ ಮನೆ ಬಿಟ್ ಹೋಗಿಲ್ವಾ ಅಂತ ರೇಗಿಸೋದು.. ಅವಳಿಗೆ ಹೊಡೆಯೋದು.. ಮನೆ ಬಿಟ್ ಹೋಗು ಅನ್ನೋದು....! ಒಂದು ದಿನ ಈ ಪುಣ್ಯಾತ್ಮ ಎಷ್ಟು ಹೊಡೆದು ಬಿಟ್ಟಿದ್ದ ಅಂದ್ರೆ ನಾಯಕಿಯ ಕೈಯ ಮೇಲೆ ಗಾಯ ಆಗುವಷ್ಟು...!! ಎಂದಿನಂತೆ ಮರುದಿನ ನಾಯಕಿ ರೆಡಿಯಾಗಿ ಆಫೀಸ್ ಹೋದಾಗ ನಾಯಕಿಯ ಸಹೋದ್ಯೋಗಿಗಳೆಲ್ಲಾ ಕರೆದು ವಿಚಾರಿಸಿದಾಗ ನಾಯಕಿ ತಾನು ಅನುಭವಿಸಿದ ನೋವನ್ನೆಲ್ಲಾ ಬಿಚ್ಚಿಟ್ಟಿದ್ದಾಳೆ...!!!! ಅಲ್ಲಿಗೆ ಸ್ಪಷ್ಟ ಆಕೆಯ ಸಹನೆಯ ಕಟ್ಟೆ ಕೊಡಿ ಬಿದ್ದಿತ್ತು..!! ಕಣ್ಣೀರು ಧಾರಾಕಾರವಾಗಿ ತನಗರಿವಿಲ್ಲದಂತೆ ಹರಿದಿತ್ತು.... ಸಾಕು... ಇನ್ನೊಂದು ಪಾರ್ಟ್ ಅಲ್ಲಿ ಕಥೆ ಮುಗಿಸಿ ಬಿಡೋಣ...
ಸರಿ ಆಗಿದ್ದಾಗಲಿ ಅಂತ ನಿರ್ಧಾರಕ್ಕೆ ಬಂದ ನಾಯಕಿ ಒಲ್ಲದ ಮನಸ್ಸು, ಹಾಗೂ ದೃಢ ನಿರ್ಧಾರದಿಂದ ನಾಐಕನ ಸಖ್ಯದಿಂದ ಹಿಂದೆ ಸರಿದಿದ್ದಾಳೆ.. ಎಲ್ಲಿಯವರೆಗೆ ಅಂದರೆ ಎಲ್ಲವನ್ನೂ ನಾನೊಬ್ಬಳೇ ಎದುರಿಸುತ್ತೇನೆ,, ಆಗಿದ್ದಾಗಲಿ ವಿಚ್ಛೇದನ ಪಡೆದುಕೊಂಡು ಏಕಾಂಗಿಯಾಗಿ ಜೀವನ ಸವೆಸುತ್ತೇನೆ ಅನ್ನುವಷ್ಟರ ಮಟ್ಟಿಗೆ,,,, ಸದ್ಯ ನಾನು ಬೇರೆ ಕಡೆ ವಾಸ ಮಾಡ್ತೀನಿ ಅಂತ ಹೇಳಿದ ನಾಯಕಿ ಸೀದಾ ತನ್ನ ಬಟ್ಟೆಗಳನ್ನ ಪ್ಯಾಕ್ ಮಾಡಿಕೊಂಡು ತಾಯಿ ಮನೆಗೆ ಬಂದು ವಾಸವಾಗಿದ್ದಾಳೆ... ಇಲ್ಲಿಯವರೆಗೆ ತನ್ನ ತಪ್ಪಿನ ಅರಿವಾಗದ ನಾಯಕನಿಗೆ ನಾಯಕಿ ಮನೆ ಬಿಟ್ಟು ಹೋದ ಕೂಡಲೇಸಸ ತನ್ನ ಮನೆ ಬೀಕೋ ಅನ್ನಲು ಶುರು ಮಾಡಿದೆ... ಬೇಸರ ಆಗಿದೆ.. ಅದೆಷ್ಟೋ ಬಾರಿ ನಾಯಕಿಯ ಮನೆ ಮುಂದೆ ಹೋಗಿ ಅತ್ತೂ ಕರೆದು ಅಂಗಲಾಚಿದ್ದಾಳೆ... ಆಗ ನಾಯಕಿ ಮಾಡಿದ್ದೇನು ಗೊತ್ತಾ....? ಸೀದಾ ಪೊಲೀಸರಿಗೆ ಕರೆ ಮಾಡಿ ದೂರು ದಾಖಲಿಸಿದ್ದಾಳೆ..... ಇದೀಗ ಜೋಡಿ ಹಕ್ಕಿಗಳು ವಿಚ್ಛೆದನಕ್ಕೆ ಎದುರು ನೋಡ್ತಿದೆ...
ಇಷ್ಟು ವಿಚಾರ ಬರೆಯಲು ಮನಸ್ಸಿರಲಿಲ್ಲ... ಆದ್ರೆ ಏನ್ ಮಾಡ್ಲಿ... ಪಾಪಪ್ರಜ್ಞೆ... ನಾಯಕ ನಾಯಕಿ ಇಬ್ಬರೂ ಲೇಖಕರ ಸ್ನೇಹಿತರು... ಅವರಿಬ್ಬರೂ ಬೇರಾಗ್ತಾ ಇದ್ದಾರಲ್ಲಾ ಅನ್ನುವ ಕೊರಗು...!!!! ಲೇಖಕನ ಬಳಿ ಇರುವ ಆಯ್ಕೆ ಒಂದೇ.. ಇಬ್ಬರ ಮನಸ್ಸು ಬದಲಾಗಲಿ.. ನಾಯಕ ತನ್ನ ತಪ್ಪು ತಿದ್ದಿಕೊಳ್ಳಲಿ... ನಾಯಕಿ ನಾಯಕನನ್ನು ಕ್ಷಮಿಸಿ ಜೊತೆಯಾಗಲಿ.. ಇದೋಂದೇ ಹಾರೈಕೆಯಷ್ಟೇ...
ಕಥೆಗೆ ಬಿದ್ದಿತ್ತು ತೆರೆ...
ಪ್ರೀತಿಗೆ ಬಿದ್ದಿತ್ತು ಬರೆ...
ಪ್ರೀತಿಸಿದ ಜೀವವೊಂದು ನೋವಲ್ಲೇ ಅಳುತ್ತಿತ್ತು...
ಕೊನೆಗೂ ಹೇಳಿತ್ತು ಒಂದು ಮಾತು...
ನಿನ್ನನ್ನು ದೂರ ಮಾಡುತ್ತಿದ್ದೇನೆ ಅಂದರೆ ಜೀವನ ಪೂರ್ತಿ ನೀನು ನನಗೆ ಬೇಡವೇ ಬೇಡ ಎಂದು...