ಹೌದು ಅದು ಇಂದಿಗೆ ಸರಿಯಾಗಿ ಒಂದು ವರುಷದ ಹಿಂದಿನ ಮಾತು...ಆಗಷ್ಟೇ ರೆಕ್ಕೆ ಬಲಿತ ಹಕ್ಕಿಯು ಸ್ವಚ್ಛಂದವಾಗಿ ಹಾರಾಡಲು ಕನವರಿಸುವಂತೆ, ಆಗಷ್ಟೇ ನನ್ನ ಪದವಿ ಶಿಕ್ಷಣ ಮುಗಿಸಿದ ನಾನು, ಮಾಧ್ಯಮವೆಂಬ ಜಗತ್ತಿಗೆ ಹಾರಾಡಬೇಕೆಂಬ ಅಭಿಲಾಷೆಯಿಂದ ಹಾರಾಡುತಲಿದ್ದೆ...
ಮಂಗಳೂರಿನಲ್ಲೇ ಒಂದು ಪುಟ್ಟ ಸುದ್ದಿ ಜಾಲತಾಣದಲ್ಲಿ ಕೆಲಸ ಮಾಡುತ್ತಿದ್ದ ನನಗೆ ದೂರದ ಮಾಯಾನಗರಿ ಬೆಂಗಳೂರಿನಿಂದ ಕರೆಯೊಂದು ಬಂದಿತ್ತು... ಬೆಂಗಳೂರಿನಲ್ಲಿ ವಾಹಿನಿಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ನನ್ನ ಗುರುಗಳಿಂದ ಕೆಲಸದ ಬಗ್ಗೆ ಮಾಹಿತಿಯೊಂದು ಬಂದಿತ್ತು ಅಂತೂ ಇಂತೂ ಬೆಂಗಳೂರೆಂಬ ಮಾಯಾನಗರಕ್ಕೆ ಕಾಲಿಡುತ್ತಿದ್ದೇನಲ್ಲಾ ಎಂಬ ಖುಷಿ... ಜೊತೆಗೆ ನಾನು ಇಷ್ಟ ಪಡುವ ಸ್ವಾಮೀಜಿಯವರಿಗೆ ಬೇಸರ ಪಡಿಸುತ್ತಿದ್ದೇನೆಂಬ ನೋವು ಎಲ್ಲಾ ಸೇರಿ ಮನದೊಳಗೊಂದು ಚಿತ್ರಾನ್ನವೆಂಬ ಮೃಷ್ಟಾನ್ನ ಭೋಜನ ಸಿದ್ಧವಾಗಿತ್ತು.. ನಾನು ಕೆಲಸ ನಿರ್ವಹಿಸುತ್ತಿದ್ದ ಸುದ್ದಿ ಜಾಲತಾಣದ ಮುಖ್ಯಸ್ಥರ ಅನುಮತಿ ಪಡೆದು, ಸ್ವಾಮಿಜಿಯ ಕಾಲುಗಳಿಗೆರಗಿ ನಮಸ್ಕರಿಸಿ ಬೆಂಗಳೂರಿನ ಬಸ್ಸನ್ನೇರಿ ಹೊರಟೇ ಬಿಟ್ಟೆ... ಹೊರಡುವುದಕ್ಕೂ ಮೊದಲು ನನಗೆ ಅತ್ಯಂತ ಪ್ರಿಯವಾದ ಒಬ್ಬ ಗೆಳೆಯ ರೋಹಿತ್ ಅಣ್ಣನ ಬಳಿ ನನ್ನೆಲ್ಲಾ ದುಗುಡಗಳನ್ನು ಹಂಚಿಕೊಳ್ಳುವಾಗ ಅವರು ಹೇಳಿದ ಮಾತು ಇಂದಿಗೂ ಮಾರ್ದನಿಸುತ್ತದೆ. “ಈರ್ ಬೆಂಗಳೂರು ಪೋಲೆ, ಅಲ್ಪ ಈರೆಗ್ ಎಡ್ಡೆ ಆಪುಂಡು, ಫಸ್ಟ್‍ಗ್ ಒಂಜಿ ಪತ್ತ್ ಸಾರದ ಉಲಾಯ್ ಸಂಬಳ ಈರೇಗ್ ತಿಕ್ಕುಂಡು, ಬೊಕ್ಕ ಒಂತೆನೆ ಜಾಸ್ತಿ ಆವು, ಪುರಲ್ದಪ್ಪೆ ಈರೆಗ್ ಎಡ್ಡೆ ಮನ್ಪಡ್” ಎಂದು ಹೇಳಿ ನನ್ನ ಬೀಳ್ಕೊಟ್ಟಿದ್ದರು.. ಗುರುತು ಪರಿಚಯವಿಲ್ಲದ ಜಾಗ, ನನ್ನೂರಿಗಿಂತ ನೂರು ಪಟ್ಟು ಹಿರಿದಾದ ಊರು ಬೆಂಗಳೂರು, ಹೇಗೋ ಬಂದಾಗಿದೆ ಬೆಂಗಳೂರಿನಲ್ಲಿ ಮೆಜೆಸ್ಟಿಕ್ ಎಂಬ ಜಾಗ ಬಿಟ್ಟರೆ ಮತ್ಯಾವುದೂ ಗೊತ್ತಿಲ್ಲ.. ಆಗ ನನ್ನ ನೆರವಿಗೆ ಬಂದವನೇ ಮೌಲಾನ, ಬಾರಪ್ಪಾ ಗೆಳೆಯಾ ನನ್ನ ರೂಮಿದೆ, ಬೇಕಾದರೆ ಅಲ್ಲೇ ಇರು ಎಂದು ಅವನು ಪ್ರೀತಿಯಿಂದ ಮಾತನಾಡಿಸಿದ. ಆಗಲೇ ಕೊಂಚ ಧೈರ್ಯ ಬಂದದ್ದು.
ಇನ್ನು 3 ನೇ ತಾರೀಖಿನಿಂದ ಕೆಲಸಕ್ಕೆ ಜಾಯಿನ್ ಆಗಬೇಕಿತ್ತು.. ಏನು ಮಾಡೋಣ ನನ್ನ ಆಫೀಸಿನ ಬಳಿಯಲ್ಲಂತೂ ರೂಂ, ಪಿ.ಜಿ. ಯಾವುದೂ ಸೆಟ್ ಆಗಲಿಲ್ಲ, ಸ್ವಲ್ಪ ದಿನ ಮುಂಜಾನೆ 05: ಕ್ಕೆ ಮೌಲಾನನ ರೂಂನಿಂದ ಬಂದರೆ ಮರಳೀ ಹೋಗುವುದು ರಾತ್ರಿ 12:30ಕ್ಕೆ.. ಹೀಗಿತ್ತು ನನ್ನ ದೈನಂದಿನ ದಿನಚರಿ...ಆಯಾಸ ಸುಸ್ತು, ಇವೆಲ್ಲದರ ನಡುವೆ ಏನಾದರೂ ಸಾಧನೆ ಮಾಡಬೇಕೆನ್ನುವ ತುಡಿತ. ಕೇವಲ 4000 ರುಪಾಯಿಗಳನ್ನು ಹಿಡಿದುಕೊಂಡು ಬೆಂಗಳೂರಿಗೆ ಬಂದ ನಾನು ಅನುಭವಿಸಿದ ಕೆಲ ಹಸಿವಿನ ನೋವು ಇಂದಿಗೂ ನನ್ನ ಕಣ್ಮುಂದಿದೆ... ಬೆಳಗ್ಗೆ ತಿಂಡಿ ತಿಂದರೆ ಮಧ್ಯಾಹ್ನ ಊಟಕ್ಕೆ ಕಾಸಿಲ್ಲ.. ಹೀಗೆ ಒಂದೆರಡು ದಿನ ಕಾಲಿ ನೀರು ಕುಡಿದು ಜೀವಿಸಿದ್ದು ಇದೆ. ಈ ನೋವಿನಲ್ಲೂ ಸಾಧನೆ ಮಾಡಬೇಕೆಂಬ ಛಲ ನನ್ನನ್ನು ಬೆಂಗಳೂರಿನಲ್ಲಿ ಕಟ್ಟಿ ಹಾಕಿ ಬಿಡುವಂತೆ ಮಾಡಿದೆ. ಇಂದು ನನ್ನ ಸ್ಯಾಲರಿ ಸ್ವಲ್ಪ ಏರಿಕೆಯಾಗಿದೆ ಆದರೂ ನನ್ನಲ್ಲೊಂದು ಕೊರಗಿದೆ... ಬೆಂಗಳೂರಿಗೆ ಬಂದು ಏನೂ ಸಾಧನೆ ಮಾಡಲಾಗಲಿಲ್ಲ.. ಜೊತೆಗೆ ಕೈಯಲ್ಲಿ ನಯಾಪೈಸೆಯೂ ಉಳಿಯಲಿಲ್ಲ...
ಈ ಸಂದರ್ಭದಲ್ಲಿ ನನಗೆ ಬೆಂಗಳೂರಿನಲ್ಲಿ ಸಹಕರಿಸಿದ ಎಲ್ಲರಿಗೂ ಪ್ರೀತಿಯ ಅಭಿನಂದನೆಗಳನ್ನು ತಿಳಿಸಲೇ ಬೇಕು

Don't loose heart you have bright future
ReplyDelete