ಯೂಟ್ಯೂಬ್‍ನಲ್ಲಿ ಗೀತೆಗಳನ್ನು ಕೇಳುತ್ತಲಿದ್ದ ನನಗೆ ಜನನಿ ಜನನಿ ಜನನಿ...... ಈ ಹಾಡಿನ ಸಾಲುಗಳನ್ನು ಕೇಳುತ್ತಲೇ ನನ್ನ ಮನಃಪಲ್ಲಟದಲ್ಲಿ ನನ್ನ ಬಾಲ್ಯದ ಜೀವನವನ್ನು ನೆನಪಿಸಿತ್ತು. . . ಮಾತ್ರವಲ್ಲ ನನ್ನ ಜೀವನದಲ್ಲಿ ಬಂದು ಹೋದ ಅನೇಕ ಗೆಳಯ ಗೆಳತಿಯರ ನೆನಪನ್ನು ಮಾಡಿಸಿತ್ತು...ಹೌದು ಅದು ನಾನು ನನ್ನ ಪ್ರಾಥಮಿಕ ಶಿಕ್ಷಣವನ್ನು ಕಲಿಯುತ್ತಿದ್ದಂತಹಾ ಸಮಯ. ನಾವೆಲ್ಲರೂ ಕಾಯುತ್ತಿದ್ದುದ್ದೇ ಆ ಶನಿವಾರದ ಕೊನೆಯ ಎರಡು ತರಗತಿಗಾಗಿ... ಕಲ್ಚರಲ್ ಆಕ್ಟಿವಿಟಿ ಎಂಬ ಆ ಕ್ಲಾಸ್ ಗಳಲ್ಲಿ ಎಂಜಾಯ್ ಮಾಡುವುದೆಂದರೆ ನಮಗೆ ಎಲ್ಲಿಲ್ಲದ ಸಂಭ್ರಮ.. ಅದರಲ್ಲೂ ಮುಖ್ಯವಾಗಿ ನಾವೆಲ್ಲರೂ ಕಾಯುತ್ತಿದ್ದುದ್ದು ಆ ದುಂಡು ಮುಖದ ಡಿಂಪಲ್ ಚೆಲುಚೆ ಲಿಖಿತಾ ಅವರ ಗೀತೆಗಳಿಗಾಗಿ ಮಾತ್ರ.....
ಹೌದು ನಾನೀಗ ಹೇಳಹೊರಟಿರುವುದು ಆ ದುಂಡು ಮುಖದ ಕುಳ್ಳಿ ಲಿಖಿತಾ ಬಗ್ಗೆ ಈಕೆ ನೋಡಲು ಕೊಂಚ ಗಿಡ್ಡವಾಗಿದ್ದರೂ ಈಕೆಯ ಪ್ರತಿಭೆ ಅಪಾರ.. 07 ವರುಷಗಳ ಕಾಲ ನಾವು ಜೊತೆಯಾಗಿಯೇ ಕಲಿತರೂ ನಾವಿಬ್ಬರೂ ಮಾತನಾಡಿದ್ದು ಬಹಳ ವಿರಳ.. ಹಲವಾರು ಗೆಳತಿಯರ ಬಳಗದಲ್ಲಿದ್ದ ಆ ಸುಂದರಿ ಬಾಯ್ತುಂಬ ವಟವಟ ಎಂದು ಮಾತನಾಡುತ್ತಿದ್ದರೂ ಬಾಲಕರ ಬಳಿಯಲ್ಲಿ ಆಕೆಯ ಮಾತುಕತೆ ಸ್ವಲ್ಪ ಕಡಿಮೆಯೇ ಇತ್ತು ಬಿಡಿ...
ಕಂಚಿನ ಕಂಠದ ಚೆಲುವೆ ಕಲ್ಚರಲ್ ಆಕ್ಟಿವಿಟಿ ಪಿರಿಯಡ್ಡಿನಲ್ಲಿ ವೇದಿಕೆ ಹತ್ತಿದಳೆಂದರೆ ಈಕೆಯ ಹಾಡು ಕೇಳಲು ಇಡೀಯ ತರಗತಿಗೆ ತರಗತಿಯೇ ನಿಶ್ಯಬ್ಧವಾಗಿ ಕುಳಿತು ಈಕೆಯ ಹಾಡಿಗೆ ತಲೆದೂಗುತ್ತಿತು.. ಆಕೆಯ ಕಂಠದ ಮಾಧುರ್ಯವೆ ಆ ರೀತಿಯಾಗಿತ್ತು. ಬಾಲ್ಯದಿಂದಲೇ ಸಂಗೀತವನ್ನು ಅಭ್ಯಸಿಸಿಕೊಂಡು ಬಂದಹಾ ಈಕೆಯು ಸಂಗೀತವನ್ನೇ ತನ್ನ ಉಸಿರಾಗಿಸಿಕೊಂಡದ್ದಂತೂ ಸುಳ್ಳಲ್ಲ.. ಅಂದಿನಿಂದ ಇಂದಿನ ವರೆಗೂ ಸಂಗೀತವನ್ನು ಒಂದು ದೇವತೆಯಂತೆಯೇ ಪೂಜಿಸಿಕೊಂಡು ಬಂದಿರುವ ಈಕೆಯ ಸ್ವರ ಮಾಧುರ್ಯ ನಿಜವಾಗಿಯೂ ಕೇಳುಗರನ್ನು ಒಂದು ಕ್ಷಣ ಕೇಳುವಂತೆಯೇ ಮಾಡುತ್ತದೆ..
ಅದಿರಲಿ... ಇನ್ನು ಈಕೆಯ ನೆನಪು ಇಂದು ನನಗಾಗಲು ಇನ್ನೂ ಒಂದು ಕಾರಣವಿದೆ.. ಉಜಿರೆಯಲ್ಲಿ ನನ್ನ ಪ್ರಾಥಮಿಕ ವಿದ್ಯಾಬ್ಯಾಸವನ್ನು ಕೊನೆಗೊಳಿಸಿದ ನಾನು ನನ್ನ ಪ್ರೌಢ ವಿದ್ಯಾಭ್ಯಾಸಕ್ಕಾಗಿ ಮಂಗಳೂರೆಂಬ ಮಾಯಾನಗರಿಗೆ ಕಾಲಿಟ್ಟಿದ್ದೆ , ಹೊಸ ಜಾಗ ಹೊಸ ಗೆಳೆಯರ ನಡುವೆ ನನ್ನ ಹಳೆಯ ಸ್ನೇಹವನ್ನೇಲ್ಲಾ ಮರೆತಿದ್ದೆ... ಎಂಟು ವರುಷಗಳ ಸಮಯದಲ್ಲಿ ನಾನು ಅನೇಕಾನೇಕ ಹೊಸ ಗೆಳೆಯ ಗೆಳತಿಯರ ಸಂಪಾದಿಸಿದ್ದೆ. ಇವೆಲ್ಲದರ ನಡುವೆ ನಾನು ನನ್ನ ಪದವಿ ಜೀವನಕ್ಕೆ ಕಾಲಿಟ್ಟಿದ್ದೆ. .
ಅದು ನನ್ನ ಅಂತಿಮ ಪದವಿಯ ತರಗತಿಗಳ ಸಮಯ ನಮ್ಮ ಕಾಲೇಜಿನಲ್ಲಿ ಪ್ರತಿ ವರುಷದಂತೆ ನಡೆಯುವ ಅಂತರ ಕಾಲೇಜು ಸ್ಪರ್ಧೆಗೆ ನಿರೂಪಕನಾಗಿ ನನ್ನ ಕಾರ್ಯ ನಾನು ನಿರ್ವಹಿಸುತಲಿದ್ದೆ. ಆಗಷ್ಟೇ ಉಜಿರೆಯ ಖಾಸಗಿ ಕಾಲೇಜಿನ ಬಸ್ಸಿನಿಂದ ಸ್ಫರ್ದಿಗಳು ನಮ್ಮ ಕಾಲೇಜಿನ ಪ್ರಾಂಗಣದೊಳಗೆ ಕಾಲಿಟ್ಟಿದ್ದರು. . . ಬಸ್ಸಿನಿಂದಿಳಿದೆಲ್ಲರನ್ನು ನೋಡುತ್ತಿದ್ದ ನನಗೆ ಮತ್ತದೇ ಕುಳ್ಳಿಯನ್ನು ಕಂಡು ಆಶ್ಚರ್ಯವಾಯಿತು. ಹೌದು ಮುಖದಲ್ಲಿ ಒಂದಿನಿತೂ ವ್ಯತ್ಯಾಸವಿಲ್ಲ. . . ಹೈ ಹೀಲ್ಸ್ ಚಪ್ಪಲಿ ಹಾಕಿದ್ದು ಬಿಟ್ಟರೆ ಎತ್ತರವಂತೂ ಆಗಿಲ್ಲ.. . ಅದೇ ಲಿಖಿತ ಎಂಟು ವರುಷಗಳ ಹಿಂದೆ ನಮ್ಮ ತರಗತಿಯಲ್ಲಿ ಓದುತ್ತಿದ್ದ ಲಿಖಿತ... ತಮ್ಮ ಕಾಲೇಜಿನ ಪರವಾಗಿ ಹಾಡಲು ಬಂದಿದ್ದಳು , ಆಕೆಯನ್ನು ಕಂಡು ಮತ್ತೊಮ್ಮೆ ಆಕೆ ಹೌದೋ ಅಲ್ಲವೋ ಎಂದು ಪರಿಶೀಲಿಸಿ ಮಾತನಾಡಿಸಿದೆ. . ಆಗ ಆಕೆಯ ನಗುಮೊಗದಲ್ಲಿ ಮತ್ತದೇ ಗುಳಿಯ ಕಂಡೆ.. ಆಕೆ ಕೇವಲ ಗಾಯಕಿಯಲ್ಲ ಒಬ್ಬ ಉತ್ತಮ ಗಾಯಕಿ , ಜಾನಪದ ಶೈಲಿಯ ಗೀತೆಗಳನ್ನು ಆಕೆ ಎಷ್ಟು ಸೊಗಸಾಗಿ ಹಾಡುವಳೆಂದರೆ ಕೇಳುವವರ ಮೈಮನದಲ್ಲಿ ಆ ಹಳ್ಳಿಯ ಸೊಗಡಿನ ಕಂಪನ್ನು ಬೀರುವಂತಹಾ ಸ್ವರ ಮಾಧುರ್ಯ ಇನ್ನು ಆಕೆಗಿರುವ ಗೀಳೆಂದರೆ ಡಬ್ಮ್ಯಾಶ್.. ಚಿಕ್ಕ ಬಾಲೆಯಂತೆ ಕಾಣುವ ಆಕೆಯ ಮೊಗ ನೋಡುವಾಗ ನಗುವುಕ್ಕಿ ಬರುತ್ತಿದೆ. . ಪ್ರಸ್ತುತ ಮಂಗಳೂರಿನಲ್ಲಿ ಕಾನೂನು ಪದವಿ ಅಭ್ಯಸಿಸುತ್ತಿರುವ ಈಕೆಗೆ ಶುಭ ಹಾರೈಕೆಗಳು. . ಗೆಳತಿ ಉತ್ತಮ ಲಾಯರ್ ಆಗಿ ಉತ್ತಮ ಹಾಡುಗಾರ್ತಿಯಾಗಿ ಉತ್ತಮ ನಟಿಯಾಗಿ ಜೀವನದಲ್ಲಿ ಉತ್ತುಂಗ ಶಿಖರಕ್ಕೇರುವಂತಾಗಲಿ.. .
ಇಂತಿ
ಅಕ್ಷಯ್